ರಜಾದಿನಗಳಲ್ಲಿ ಶ್ರವಣಬೆಳಗೋಳಕ್ಕೆ ಭೇಟಿ ನೀಡಿ

ರಜಾದಿನಗಳಲ್ಲಿ ಶ್ರವಣಬೆಳಗೋಳಕ್ಕೆ ಭೇಟಿ ನೀಡಿ
- ಪವಿತ್ರಾ ರಜಾದಿನಗಳಲ್ಲಿ ಭೇಟಿ ನೀಡಲು ಆಕರ್ಷಕ ಸ್ಥಳಗಳಲ್ಲಿ ಶ್ರವಣಬೆಳಗೋಳ ಕೂಡ ಒಂದು ಪ್ರಮುಖವಾದ ಸ್ಥಳ. ಇಲ್ಲಿ ಬಾಹುಬಲಿಯ ಬೃಹತ್ ಪ್ರತಿಮೆ ಇದೆ. ಇದಕ್ಕೆ ಇಲ್ಲಿ ಗೋಮ್ಮಟೇಶ್ವರ ಎಂದು ಕರೆಯುತ್ತಾರೆ. ಇಲ್ಲಿಗೆ ಪ್ರತಿವರ್ಷ ವಿಶ್ವದಾದ್ಯಂತ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಿರಿ. ವಿಶ್ವದ ಅತಿ ಎತ್ತರದ ಏಕಶಿಲೆಯ ಕಲ್ಲಿನ ಪ್ರತಿಮೆ ಎಂದು ಕರೆಯಲ್ಪಡುವ ಗೋಮ್ಮಟೇಶ್ವರ ಪ್ರತಿಮೆಯು 58 ಅಡಿ ಎತ್ತರ ಮತ್ತು ಒಂದೇ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇದು ಜೈನರ ಬಹಳ ಪವಿತ್ರ ತೀರ್ಥಯಾತ್ರೆಯ ತಾಣವಾಗಿದೆ. ಇಲ್ಲಿ ಸಾಕಷ್ಟು ಜೈನ ದೇವಾಲಯಗಳಿವೆ. ಈ ಪ್ರದೇಶವು ಸುಂದರವಾದ ಚಂದ್ರಗಿರಿ ಮತ್ತು ವಿಂಧ್ಯಗಿರಿ ಬೆಟ್ಟಗಳು ಸುತ್ತುವರಿದಿದೆ. ಈ ಪ್ರದೇಶದ ಸುತ್ತಲೂ ಚಾರಣ ಮತ್ತು ಕ್ಯಾಂಪಿಂಗ್ ಗಾಗಿ ಹಲವಾರು ಸ್ಥಳಗಳಿವೆ. 1126ರಲ್ಲಿ ಹೊಯ್ಸಳ ರಾಜರ ಖಜಾಂಚಿಯಿಂದ ನಿರ್ಮಿಸಲಾದ ಶ್ರವಣಬೆಳಗೋಳದಲ್ಲಿರುವ ಅತಿದೊಡ್ಡ ದೇವಾಲಯವಾದ ಭಂಡಾರಿ ಬಸದಿ ದೇವಾಲಯ ಇಲ್ಲಿನ ಪ್ರಮುಖ ಆರ್ಕಷಣೆಯಾಗಿದೆ. ಇಲ್ಲಿ 12 ವರ್ಷಕ್ಕೊಮ್ಮೆ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಶ್ರವಣ ಬೆಳಗೋಳಕ್ಕೆ ಭೇಟಿ ನೀಡಲು ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಸೂಕ್ತ ಸಮಯವಾಗಿದೆ. ಜುಲೈ ಮತ್ತು ಆಗಸ್ಟ್ ನಲ್ಲಿ ನಡೆಯುವ ಗಣೇಶ ಚತುರ್ಥಿಯನ್ನು ಶ್ರವಣಬೆಳಗೋಳದಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ