ಜಿಲ್ಲಾ ಸುದ್ದಿತುಮಕೂರುಬೆಂಗಳೂರು ಗ್ರಾಮಾಂತರರಾಜ್ಯಸುದ್ದಿ

115 ಮಕ್ಕಳಿಗೆ ಶಿವಕುಮಾರ ಶ್ರೀ ಹೆಸರು

ನಡೆದಾಡುವ ದೇವರು, ಕಾಯಕ ಯೋಗಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳು 2019 ರ ಸೋಮವಾರ(ಜನವರಿ 21)ದಂದು ಕೈಲಾಸವಾಸಿಯಾಗಿದ್ದಾರೆ.

ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು ,

ಪೂಜ್ಯ ಸ್ವಾಮೀಜಿಯವರ 115 ನೇ ಹುಟ್ಟುಹಬ್ಬದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಏ.1 ರಂದು 115 ಮಕ್ಕಳಿಗೆ ಶ್ರೀಗಳ ಹೆಸರುಗಳನ್ನು ನಾಮಕರಣ ಮಾಡುವ ಕಾರ್ಯಕ್ರಮವನ್ನು ರಾಜಾಜಿನಗರದ ಡಾಕ್ಟರ್ ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ಆಯೋಜಿಸಿದೆ.ಹೊಸ ತೊಟ್ಟಿಲು, ಹೊಸ ಉಡುಪು ನೀಡಲಾಗುವುದು. ಒಂದು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದ್ದು ಈಗಾಗಲೇ ನಾಮಕರಣ ಆಗಿರಬಾರದು. ಅರ್ಜಿ ಸಲ್ಲಿಸಲು ಮಾ.29 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ:8951305174 ಮತ್ತು 9019405060

Spread the love

Related Articles

Leave a Reply

Your email address will not be published. Required fields are marked *

Back to top button