ಅತ್ತಿಗೆ ಮೇಲೆಯೇ ಕಣ್ಣುಹಾಕಿ ಮಸಣ ಸೇರಿದ ಯುವಕ

ಕಲಬುರಗಿ: ಇಂಜಿನಿಯರಿಂಗ್ ಮುಗಿಸಿ ಖಾಸಗಿ ಸಿವಿಲ್ ಕಾಂಟ್ರಾಕ್ಟರ್ನ ಬಳಿ ಕೆಲಸ ಮಾಡುತ್ತಿದ್ದ ಯುವಕನ ಬರ್ಬರ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, ಅತ್ತಿಗೆ ಮೇಲೆ ಕಣ್ಣು ಹಾಕಿದ್ದು ಎಂಬ ಕಾರಣಕ್ಕೆ ಕೊಲೆಗೆ ನಡೆದಿದೆ ಅನ್ನೊ ಸತ್ಯ ಬೆಳಕಿಗೆ ಬಂದಿದೆ.
ಆಳಂದ ತಾಲೂಕಿನ ಬೋದಾನ್ ಗ್ರಾಮದ ನಿವಾಸಿ ಶಿವಪುತ್ರ ಪಗಡೆ ಎಂಬ ಯುವ ಇಂಜಿನಿಯರ್ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಕಳೆದ ಜೂನ್ 20 ರಂದು ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಬಳಿ ಪತ್ತೆಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಅಡೂರು ಶ್ರೀನಿವಾಸುಲು ಮತ್ತು ಸಿ ವಿಭಾಗದ ಎಸಿಪಿ ಜೆಎಚ್ ಇನಾಮ್ದಾರ್ ಮತ್ತು ಶ್ವಾನದಳ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದರೆ ಸ್ಥಳದಲ್ಲಿ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ವಸ್ತುಗಳು ಸಿಕ್ಕಿರಲಿಲ್ಲ. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಹತ್ಯೆಯಾದ ಶಿವಪುತ್ರನ ಸಹೋದರ ಸಂಬಂಧಿಯೇ ಈ ಕೃತ್ಯ ಎಸಗಿರೋದನ್ನು ಪತ್ತೆ ಮಾಡಿ, ಶರಣಬಸವ ಕಾಂದೆ, ಚೆನ್ನವೀರ ಕಾಂದೆ, ಬಸಲಿಂಗಪ್ಪ ಕಮಲಾಪುರ ಮೂವರನ್ನ ಬಂಧಿಸಿದ್ದಾರೆ.
ಅತ್ತಿಗೆ ಮೇಲೆ ಕಾಮದೃಷ್ಟಿ:
ಹತ್ಯೆಯಾದ ಶಿವಪುತ್ರ ಸಂಬಂಧದಲ್ಲಿ ಅಣ್ಣ ಆಗುತ್ತಿದ್ದ ಶರಣಬಸವ ಅವರ ಮನೆಗೆ ಬಂದು ಹೋಗ್ತಿದ್ದ. ಶರಣಬಸವ ಮನೆಯಲ್ಲಿ ಇಲ್ಲದೇ ಇರೋವಾಗ ಮನೆಗೆ ಬಂದು ಶರಣಬಸವನ ಪತ್ನಿಯೊಂದಿಗೆ ಶಿವಪುತ್ರ ಸಲುಗೆಯಿಂದ ಮಾತಾನಾಡಿಸೊದು ಮಾಡ್ತಿದ್ದ. ಸಂಬಂಧದಲ್ಲಿ ಮೈದುನನಾಗ್ತಿದ್ದ ಶಿವಪುತ್ರನನ್ನ, ಶರಬಸವ ಪತ್ನಿ ಕೂಡ ಸಲುಗೆಯಿಂದ ಮಾತಾಡ್ತಾಯಿದ್ದರು. ಆದರೆ ಶಿವಪುತ್ರ ಮಾತ್ರ ಆಕೆಯ ಮೇಲೆ ತನ್ನ ಕಾಮದೃಷ್ಟಿ ಬಿರಿದ್ದ. ಮಾತು ಮಾತಿನಲ್ಲಿ ಅತ್ತಿಗೆಯನ್ನ ಚುಡಾಯಿಸೊದು ಮಾಡ್ತಿದ್ದ. ಈ ವಿಷಯ ಶರಣಬಸವಗೆ ಗೋತ್ತಾದಾಗ ಶಿವಪುತ್ರ ಮೇಲೆ ಕಣ್ಣಿಟ್ಟಿದ್ದರು. ಜೂನ್ 19 ರಂದು ಶರಣಬಸವ ಮನೆಗೆ ಬಂದಾಗ ಶಿವಪುತ್ರ ಮನೆಯಲ್ಲಿ ಇರೋದನ ಕಂಡು ಕೊಪಗೊಂಡು ತಮ್ಮ ಬುಲೆರೋ ವಾಹನದಲ್ಲಿ ಕೈಕಟ್ಟಿಹಾಕಿ ಕಿಡ್ಯ್ನಾಪ್ ಮಾಡಿಕೊಂಡು ಸೈಯದ್ ಚಿಂಚೋಳಿ ಗ್ರಾಮದ ಬಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಅಡೂರು ಶ್ರೀನಿವಾಸಲು, ಸಂಬಂಧದಲ್ಲಿ ಸಹೋದರನಾಗಿದ್ದ ಶರಣಬಸವನ ಮನೆಗೆ ಹೋಗಿ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸೊದು, ಚುಡಾಯಿಸೊದನ್ನ ಮಾಡ್ತಿದ್ದ ಶಿವಪುತ್ರನ್ನ ಬುಲೆರೋ ವಾಹನದಲ್ಲಿ ಕಿಡ್ಯ್ನಾಪ್ ಮಾಡಿಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ ಅಂತಾ ಹೇಳಿದ್ದಾರೆ.