ಉಪ ಸಭಾಧ್ಯಕ್ಷ ಆನಂದ್ ಮಾಮನಿ ಆಂಬುಲೆನ್ಸ್ ಕೊಡುಗೆ

ಬೆಳಗಾವಿ: ಸವದತ್ತಿ ಯ ಶಾಸಕ ಹಾಗೂ ಉಪ ಸಭಾಧ್ಯಕ್ಷ ರಾಗಿರುವ ಆನಂದ್ ಮಾಮನಿ ತಾಲೂಕು ಆಡಳಿತಕ್ಕೆ ಕೋವಿಡ್ ಸಂದರ್ಭದಲ್ಲಿ ಸಹಾಯ ಆಗುವಂತೆ ಮೂರು ಆಂಬುಲೆನ್ಸ್ ಗಳನ್ನ ಒದಗಿಸಿದ್ದಾರೆ. ಯರಗಟ್ಟಿಗೆ, ಮುನವಳ್ಳಿ ಹಾಗೂ ಸವದತ್ತಿ ಆರೋಗ್ಯ ಕೇಂದ್ರಗಳಿಗೆ ಆಂಬುಲೆನ್ಸ ಗಳನ್ನ ಹಸ್ತಾಂತರಿಸಿದ್ದಾರೆ.
ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮೂರು ಆಂಬುಲೆನ್ಸ್ ವಾಹನವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಒದಗಿಸಿರುವುದಾಗಿ ಅವರು ಹೇಳಿದ್ದಾರೆ.
ಜಗತ್ತನ್ನು ಕಾಡುತ್ತಿರುವ ಕರೋನಾ ಮಾಹಾಮಾರಿ ಹೊಡೆತಕ್ಕೆ ಕ್ಷೇತ್ರದ ಜನತೆ ಯಾವುದೇ ತೊಂದರೆಗೆ ಸಿಲುಕಬಾರದು ಮತ್ತು ಜನರ ಸಹಾಯಕ್ಕೆ ಅಂಬ್ಯುಲೆನ್ಸ್ಗಳನ್ನು ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಹೇಳಿದರು. ಸರ್ಕಾರ ಬಡವರ ಜತೆಗಿದ್ದು ಯಾವುದೇ ಬಡ ಕುಟುಂಬಗಳು ಹಸಿವಿನಿಂದ ಮಲಗಬಾರದು ಎಂದು ಪ್ರತಿ ತಿಂಗಳು ಉಚಿತ ಪಡಿತರವನ್ನು ದೀಪಾವಳಿವರೆಗೂ ದೊರೆಯಲಿದೆ. ದುಡಿಯುವ ಕೈಗಳಿಗೆ ರಾಷ್ಟ್ರೀಯ ಉದ್ಯೋಗ ಕಾತ್ರಿ ಯೋಜನೆ ಅಡಿ ಪ್ರತಿಯೊಬ್ಬರಿಗೆ ಕೆಲಸ ನೀಡಿದೆ ಎಂದು ಹೇಳಿದರು
ಕೋವಿಡ್-19 ಮೂರನೆ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ಲಸಿಕೆ ತಯಾರು ಆಗುತ್ತಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲ, ಕರೋನಾ ತೊಲಗಿಸಲು ಪ್ರತಿಯೊಬ್ಬರು ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಿ, 18 ವರ್ಷ ಮೇಲ್ಪಟ್ಟವರಿಗೆ ಜೂ 21 ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿಗಳು ಘೋಷಿಸಿದ್ದು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ,ಈ ವೇಳೆ ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ ಮಠದ, ತಾಪಂ ಇಓ ಯಶವಂತಕುಮಾರ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ತಹಶೀಲ್ದಾರ ಗ್ರೇಡ್-2 ಎಮ್ ವಿ ಗುಂಡಪ್ಪಗೋಳ, ತಾಲೂಕಾ ವೈಧ್ಯಾಧಿಕಾರಿ ಮಹೇಶ ಚಿತ್ತರಗಿ ಹಾಜರಿದ್ದರು