ಅಪ್ರಾಪ್ತರಿಗೆ ಮದ್ಯ ಕುಡಿಸಿದ್ದ ಇಬ್ಬರ ಬಂಧನ

ರಾಮನಗರ: ತಿದ್ದು ಬುದ್ದಿ ಹೇಳಬೇಕಾದವರೇ ಮಕ್ಕಳನ್ನು ದಾರಿ ತಪ್ಪಿಸಲು ಮುಂದಾಗಿ, ವಿಕೃತಿ ಮೆರೆದಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅವರೆಲ್ಲರೂ ಏನೂ ಅರಿಯದ ಮುದ್ದಾದ ಅಪ್ರಾಪ್ತ ಮಕ್ಕಳು. ಆ ಬಾಲಕರಿಗೆ ಸಮಾಜದ ಅರಿವೇ ಇರಲಿಲ್ಲ. ಅಂತಹ ಬಾಲಕರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಲಾಕ್ ಡೌನ್ ನಲ್ಲಿ ಮಕ್ಕಳಿಗೆ ವಿದ್ಯಾಭಾಸ್ಯವಿಲ್ಲದೇ ಪೋಷಕರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಮನೆ ಕೆಲಸ ಮಾಡಿಕೊಂಡು ಕೆಲವು ಮಕ್ಕಳು ಕಾಲ ಕಳೆಯುತ್ತಿದ್ದಾರೆ. ಆದ್ರೆ, ಬುದ್ದಿ ಹೇಳಿ ಮಕ್ಕಳಿಗೆ ಪಾಠ ಹೇಳಬೇಕಾದ ಪೋಷಕರೇ ಮಕ್ಕಳನ್ನ ದಾರಿ ತಪ್ಪಿಸಲು ಮುಂದಾಗಿದ್ದಾರೆ. ಹತ್ತು ವರ್ಷದ ಕೆಳಗಿರುವ ಮಕ್ಕಳಿಗೆ ಬಾಡೂಟ ಹಾಕಿ ಮದ್ಯ ಕುಡಿಸುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗಡಿ ಭಾಗದ ಮರಳಿಪುರ ಎಂಬ ಗ್ರಾಮದಲ್ಲಿ ನಡೆದಿದೆ. ಕಳೆದ ಹತ್ತು ದಿನಗಳ ಹಿಂದೆ ಗ್ರಾಮದ ಬಾಳೆ ತೋಟವೊಂದರಲ್ಲಿ ಬಾಡೂಟ ಆಯೋಜನೆ ಮಾಡಿದ್ದರು. ಬಾಳೆ ತೋಟದಲ್ಲಿ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುತ್ತಿರುವ ವಿಡಿಯೋ ಸಕ್ಕತ್ ವೈರಲ್ ಆಗಿತ್ತು.