ಜಿಲ್ಲಾ ಸುದ್ದಿ
ತಂದೆಯನ್ನೇ ಕಡಿದು ಕೊಂದ ಮಗ

ಮಗನಿಂದಲೇ ಹಲ್ಲೆಗೀಡಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇಂಥದೊಂದು ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಬಾಳೂರಿನ ಚನ್ನಹಡ್ಲು ಗ್ರಾಮದ ಪಾರ್ಶ್ವವಾಯುಪೀಡಿತ ಸುಂದರ ಪೂಜಾರಿ ಈ ದುರ್ದೈವಿ.
ಎರಡು ದಿನಗಳ ಹಿಂದೆ ಮಗ ಕುಡಿದ ಮತ್ತಿನಲ್ಲಿ ಕೊಡಲಿಯಿಂದ ತಲೆಗೆ ಕಡಿದು ಅಮಾನುಷ ಕೃತ್ಯ ಎಸಗಿದ್ದ. ಕಳೆದೊಂದು ವರ್ಷದಿಂದ ಪಾರ್ಶ್ವವಾಯು ಕಾಯಿಲೆಯಿಂದ ಮೂಲೆಯಲ್ಲಿ ನರಳುತ್ತಿದ್ದ ಸುಂದರ ಪೂಜಾರಿಯನ್ನು ಮಗ ನಿಕೇಶ್ ಕಡಿದಿದ್ದ.
ಹಣಕ್ಕೆ ನಿಕೇಶ್ ಪೀಡಿಸುತ್ತಿದ್ದ ಎನ್ನಲಾಗಿದೆ. ತಾಯಿ ಹತ್ತಿರ ಜಗಳ ಮಾಡಿ ಕೊನೆಗೆ ತಾಯಿಯನ್ನೂ ಮೂಲೆಗೆ ದೂಡಿ ತಂದೆಯ ತಲೆಗೆ ಕೊಡಲಿಯಿಂದ ಹೊಡೆದಿದ್ದ. ಬಳಿಕ ಕಾರಿನಲ್ಲಿ ತಾನೇ ಹೋಗಿ ಕೊಡಲಿಸಹಿತ ಪೊಲೀಸರಿಗೆ ಶರಣಾಗಿದ್ದ.
ತೀವ್ರ ಗಾಯಗೊಂಡಿದ್ದ ಸುಂದರ ಪೂಜಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
