ಬಾಗಲಕೋಟೆ

ಬಾಗಲಕೋಟೆಯಲ್ಲಿ ಕೋವಿಡ್ ಎಫೆಕ್ಟ್; ಬೀಜ ಗೊಬ್ಬರ ಖರೀದಿಸಲು ಹಣ ಇಲ್ಲ; ಪರಿಹಾರಕ್ಕೆ ರೈತರ ಮೊರೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ಕೋವಿಡ್ ಲಾಕ್ ಡೌನ್ ದಿಂದಾಗಿ ರೈತರ ಕೈಯಲ್ಲಿ ದುಡ್ಡಿಲ್ಲದೆ ಅತ್ತ ಬಿತ್ತನೆ ಬೀಜ ಖರೀದಿಸಲು ಆಗುತ್ತಿಲ್ಲ.ಇತ್ತ ರೈತರಿಗೆ ಸರ್ಕಾರ ಕೋವಿಡ್ ಪರಿಹಾರ ಕೊಟ್ಟಿಲ್ಲ.ಹೀಗಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.

ಬಾಗಲಕೋಟೆಯಲ್ಲಿ ಎರಡ್ಮೂರು ತಿಂಗಳಿಂದ ಉದ್ಯೋಗ ಇಲ್ಲ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದ್ದರಿಂದ ರೈತರ ಕೈಯಲ್ಲಿ ದುಡ್ಡಿಲ್ಲದೇ ಬೀಜ, ಗೊಬ್ಬರ ಖರೀದಿಗೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಭೀತಿಯ ಭಯದಿಂದ ಇನ್ನೂ ಕೂಲಿ ಕಾರ್ಮಿಕರು ನಿರೀಕ್ಷಿಸದಷ್ಟು ಕೆಲಸಕ್ಕೆ ಬರುತ್ತಿಲ್ಲ ಎನ್ನುವ ಆತಂಕವನ್ನು ರೈತರು ಹೊರಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಹಾವಳಿ ತಗ್ಗಿರುವುದು ಹಾಗೂ ಸಮಯಕ್ಕೆ ಸರಿಯಾಗಿ ಮುಂಗಾರು ಪ್ರವೇಶದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ನಿರಾಸೆಯ ಕಾರ್ಮೋಡದಲ್ಲಿ ಇದ್ದ ಅನ್ನದಾತರ ಮೊಗದಲ್ಲಿ ಮುಂಗಾರು ಮಳೆ ಮಂದಹಾಸ ಮೂಡಿಸಿದ್ದರೆ.ಬೀಜ ಗೊಬ್ಬರ ಖರೀದಿಗೆ ರೈತರು ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button