ಬಾಗಲಕೋಟೆ
ಹಾವು ಕಡಿದು ಉರಗಮಿತ್ರ ಸದಾಶಿವ ಕರಣಿ ಸಾವು

ಬಾಗಲಕೋಟೆ: ಹಿಡಿದ ಹಾವು ಕಡಿದು, ಉರಗಮಿತ್ರ ಸದಾಶಿವ ನಿಂಗಪ್ಪ ಕರಣಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿಯ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸದಾಶಿವ ನಿಂಗಪ್ಪ ಕರಣಿ(30) ಅವರಿಗೆ ಬುಧವಾರ ರಾತ್ರಿ ಹಾವು ಕಡಿದಿತ್ತು. ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದ ಅವರು, ತಡರಾತ್ರಿ ಸಾವನ್ನಪ್ಪಿದ್ದಾರೆ.
ಈತನ ತಂದೆ ಕೂಡ ನಾನಾ ರೀತಿಯ ಹಾವು ಹಿಡಿಯುವುದರಲ್ಲಿ ಪ್ರಸಿದ್ಧರು. ತಂದೆಯಂತೆ ಇವರೂ ನಾನಾ ರೀತಿಯ ಹಾವುಗಳನ್ನು ಹಿಡಿಯುವುದರಲ್ಲಿ ಪಳಗಿದ್ದರು.
ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.