ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ; ಸರ್ಕಾರದ ವಿರುದ್ಧ ಎಸ್ ಆರ್ ಪಾಟೀಲ್ ವ್ಯಂಗ್ಯ

ಬಾಗಲಕೋಟೆ: ಚಂಬಲ್ ಡಕಾಯಿತರು ಹೊಟ್ಟೆ ಹಸಿವಿಗಾಗಿ ಲೂಟಿ ಮಾಡಿದ್ರೆ.ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಲೂಟಿ ಹೊಡೆಯುತ್ತಿದೆ ಎಂದು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೈಲ್, ಅನಿಲ ಗ್ಯಾಸ್ ಬೆಲೆಹೆಚ್ವಿಸಿದ್ದಕ್ಕೆ ಬಾಗಲಕೋಟೆಯಲ್ಲಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಆಡಳಿತದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ರೂಪಾಯಿ, ಎರಡು ರೂಪಾಯಿ ಬೆಲೆ ಏರಿಕೆಯಾದ್ರೆ ಬಿಜೆಪಿಗರು ಸೈಕಲ್ ಎತ್ತಿನ ಬಂಡಿ ಏರ್ತಾ ಇದ್ರು.ಪ್ರತಿಭಟನೆ ನಡೆಸ್ತಾ ಇದ್ರು, ಈಗ ಬಿಜೆಪಿ ನಾಯಕರು ಎಲ್ಲಿದ್ದಾರೆ.ಅದಾನಿ ,ಅಂಬಾನಿ,ಶ್ರೀಮಂತರಾಗ್ತಾ ಇದ್ದಾರೆ.ದೇಶವನ್ನ ಮಾರುತ್ತಿದ್ದಾರೆ.ಎಲ್ಲೆಡೆ ಖಾಸಗೀಕರಣ ಮಾಡ್ತಿದ್ದಾರೆ ಎಂದರು.
ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಪೆಟ್ರೋಲ್ ದರ ಕಡಿಮೆ ಇದೆ.ಸೀತಾಮಾತೆಯ ದೇಶದಲ್ಲಿ ಕಡಿಮೆ ಇದೆ.ರಾವಣನ ದೇಶದಲ್ಲಿ ಕಡಿಮೆ ಇದೆ.ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ, ಮಾಜಿ ಶಾಸಕ ಜೆ ಟಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.