ಬಾಗಲಕೋಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಲಸಿಕಾ ಅಭಿಯಾನ

ಬಾಗಲಕೋಟೆ: ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಹಾಗೂ ಲಸಿಕೆ ಹಾಕುವ ಅಭಿಯಾನ ಭರದಿಂದ ಸಾಗಿದೆ.
ಬಾಗಲಕೋಟೆ ನವನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ, ಹಾಗೂ ಲಸಿಕೆ ಹಾಕಲಾಗುತ್ತಿದೆ. ನವನಗರದ ಪದವಿ ಕಾಲೇಜಿನಲ್ಲಿ 1780 ವಿದ್ಯಾರ್ಥಿಗಳಿದ್ದು , ಇವತ್ತಿನಿಂದ ಲಸಿಕೆ ಹಾಕಲಾಗುತ್ತಿದೆ. ಮೊದಲ ದಿನವೇ 150ವಿದ್ಯಾರ್ಥಿಗಳಿಗೆ, ಹಾಗೂ 50ಬೋಧಕ ಸಿಬ್ಬಂದಿಗೆ ಲಸಿಕೆ ಹಾಕಲಾಯಿತು.
ಲಸಿಕೆ ಹಾಕುವ ಕಾರ್ಯ ಇನ್ನೂ ಮೂರು ದಿನ ನಡೆಯಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಲಸಿಕೆ ಹಾಕಲಾಗುವುದು.ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸುವುದು ಕಡ್ಡಾಯಗೊಳಿಸಿದೆ.ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಲಸಿಕಾ ಕಾರ್ಯಕ್ರಮ ನಡೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಂದಿನಂತೆ ಜನಜೀವನ ನಡೆದಿದೆ. ಜಿಲ್ಲೆಯಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಉನ್ನತ ಶಿಕ್ಷಣ ಸಚಿವ ಸಿ ಅಶ್ವಥ್ ನಾರಾಯಣ ನಿರ್ದೇಶನದ ಮೇರೆಗೆ ರಾಜ್ಯದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿನ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.
ಲಸಿಕೆ ಪೂರ್ಣಗೊಂಡ ಬಳಿಕ ತರಗತಿ ಆರಂಭವಾಗಲಿವೆ.ಈಗಾಗಲೇ ಆನ್ಲೈನ್ ಮೂಲಕ ಪದವಿ ತರಗತಿಗಳು ನಡೆದಿವೆ. ಕಳೆದ ವರ್ಷದ ಮೊದಲ ಕೋವಿಡ್ ಅಲೆ ಹಿನ್ನೆಲೆಯಲ್ಲಿ ಪದವಿ ಕಾಲೇಜಿನಲ್ಲಿ ಬಹುಪಾಲು ಆನ್ಲೈನ್ ತರಗತಿಗಳು ನಡೆದಿದ್ದವು. ಬಾಗಲಕೋಟೆ ಜಿಲ್ಲೆಯಾದ್ಯಂತ ಸರ್ಕಾರಿ ಪದವಿ ಕಾಲೇಜಿನಲ್ಲಿ ಭರದಿಂದ ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದ್ದು, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದು, ಕೊರೊನಾ ಮುಕ್ತ ರಾಷ್ಟ್ರವಾಗಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕಿದೆ.