ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಕೇಸ್; ಜಾಮೀನು ಅರ್ಜಿ ತಿರಸ್ಕೃತ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ರೆಮ್ ಡಿಸಿವರ್ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತೆ ತಿರಸ್ಕೃತಗೊಂಡಿದೆ.
ಬಾಗಲಕೋಟೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಕುಲಕರ್ಣಿ ಅವರಿಂದ ತಿರಸ್ಕರಿಸಿ ಆದೇಶಿಸಿದ್ದು, ಮೇ 3ರಂದು ಬಾಗಲಕೋಟೆಯಲ್ಲಿ ರೆಮ್ ಡೆಸಿವಿರ್ ಇಂಜೆಕ್ಷನ್ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸರು ಪ್ರಕರಣ ಭೇದಿಸಿದ್ದರು. ಈ ವೇಳೆ ಬಾಗಲಕೋಟೆ ಕೋವಿಡ್ ಆಸ್ಪತ್ರೆ, ನಗರದ ವಿವಿಧ ಖಾಸಗಿ ಆಸ್ಪತ್ರೆಯ ಸೇರಿ ಒಟ್ಟು 11 ಜನ ಸಿಬ್ಬಂದಿ ಜಾಲದಲ್ಲಿ ಸಿಲುಕಿದ್ದರು. ಜೊತೆಗೆ ಆರೋಪಿಗಳು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ರೆಮ್ ಡಿಸಿವಿರ್ ಮಾರಾಟ ಮಾಡುತ್ತಿದ್ದರು..
ದಾಳಿ ವೇಳೆ 14 ರೆಮ್ ಡಿಸಿವರ್ ವೈಲ್ ಪತ್ತೆಯಾಗಿದ್ದವು. ಆರೋಪಿಗಳಾದ ತಿಮ್ಮಣ್ಣ ಗಡದನ್ನವರ,ಬಾಲಚಂದ್ರ ಭಜಂತ್ರಿ,ಮಂಜುನಾಥ ಗಾಣಿಗೇರ,ಶ್ರೀಕಾಂತ ಲಮಾಣಿ,ಗಣೇಶ್ ನಾಟಿಕಾರ್,ಪ್ರವೀಣ ಕೊಳ್ಳಿ,ಮಹಾಂತೇಶ್ ಬಿರಾದಾರ, ವಿಠ್ಠಲ ಚಲವಾದಿ,ರಂಗಪ್ಪ ದಿನ್ನಿ,ರಾಜು ಗುಡಿಮನಿ,ಭೀಮಪ್ಪ ಘಂಟಿ ಜಾಲದಲ್ಲಿ ಸಿಲುಕಿಕೊಂಡಿದ್ದರು. ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಎರಡನೇ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.