ಬೆಂಗಳೂರು ಗ್ರಾಮಾಂತರ

ನೂರು ವರ್ಷ ನಾನೇ ಶಾಸಕ ಎಂದುಕೊಂಡಿರುವುದು ಭ್ರಮೆ; ದೇವನಹಳ್ಳಿ ಶಾಸಕನಿಗೆ ಕಾಂಗ್ರೆಸ್ ಟಾಂಗ್

ದೇವನಹಳ್ಳಿ : ದೇವನಹಳ್ಳಿಯಲ್ಲಿ ನೂರು ವರ್ಷ ನಾನೆ ಶಾಸಕ, ಮೀಸಲಾತಿ ಕೊನೆಯಾದರೂ ನಾನು ಹೇಳಿದ ವ್ಯಕಿಯೇ ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಹೇಳಿರುವುದು ಅವರ ಭ್ರಮೆ ಎಂದು ದೇವನಹಳ್ಳಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಮಾಜಿ ಸಚಿವ ಕೃಷ್ಣಬೈರೆಗೌಡ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ದೇವನಹಳ್ಳಿ ಶಾಸಕರು ನಾಪತ್ತೆಯಾಗಿದ್ದಾರೆ ಎಂದು ನೀಡಿದ ಹೇಳಿಕೆ ವಾಸ್ತವವಾಗಿತ್ತು, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ದೇವನಹಳ್ಳಿ ತಾಲೂಕಿನಾದ್ಯಂತ ಜನರ ಜೊತೆಗೆ ಇದ್ದು ಅವರ ಕಷ್ಟಗಳಲ್ಲಿ ಭಾಗಿಯಾಗಿದ್ದರು. ಆದರೆ ಜವಾಬ್ದಾರಿಯತವಾಗಿ ಕ್ಷೇತ್ರದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಶಾಸಕರಾಗಲಿ ಅವರ ಪಕ್ಷವಾಗಲಿ ಜನರ ಕಷ್ಟಕ್ಕೆ ಸ್ಪದಿಸಲಿಲ್ಲ ಬದಲಿಗೆ ಅವರೆಲ್ಲ ಕೋವಿಡ್ ಗೆ ಹೆದರಿ ಮನೆ ಸೇರಿದ್ದರು.

ದೇವನಹಳ್ಳಿಯಲ್ಲಿ ಕೋವಿಡ್ ನಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಪಾಸಿಟಿವ್ ಆಗಿದ್ದಾರೆ, 200ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು ಅವರಿಗೆ ನೆರವಾಗುವ ಮಾತಿರಲಿ ಅವರ ಮನೆಯವರಿಗೆ ಸಾಂತ್ವನ ಹೇಳುವ ಕೆಲಸವನ್ನು ಕೂಡ ಶಾಸಕರು ಮಾಡಿಲ್ಲ. ನಮ್ಮ ನಾಯಕರಾದ ಕೃಷ್ಣ ಬೈರೆಗೌಡರು ಸಚಿವರಾಗಿ ಕೃಷಿ ಭಾಗ್ಯ ದಂತ ಒಳ್ಳೆಯ ಕೆಲಸ ಮಾಡಿದ್ದಾರೆ ಮತ್ತು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇಂತವರನ್ನು ಯಾರೋ ಎಂದು ಕೇವಲವಾಗಿ ಮಾತನಾಡಿರುವುದು ನೋಡಿದರೆ ದೇವನಹಳ್ಳಿ ಶಾಸಕರಿಗೆ ಕನಿಷ್ಠ ಜ್ಞಾನ ಇಲ್ಲ ಎಂದು ಅನಿಸುತ್ತದೆ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಟೀಕಿಸಿದರು.

ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಬ್ಲ್ಯಾಕ್ ಕಾಂಗ್ರೆಸ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ಜಗನ್ನಾಥ್, ಕೆಪಿಸಿಸಿ ಸದಸ್ಯ ಚಿನ್ನಪ್ಪ. ಕೃಷಿಕ ಸಮಾಜದ ಅಧ್ಯಕ್ಷ ಎಸ್ ಆರ್ ರವಿಕುಮಾರ್ ಮತ್ತು ಯುವ ಮುಖಂಡ ನಟರಾಜ್ ಭಾಗವಹಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button