ಕಾರವಾರ: ಕೋವಿಡ್ ಸೋಂಕಿತರಿಗಾಗಿ 1351 ಬೆಡ್ ಮೀಸಲು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರೀಕೃತ ಕೋವಿಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ನ್ನು ಸ್ಟೇಟ್ ಕೋವಿಡ್ ವಾರ್ ರೂಮ್ ನಿರ್ದೇಶನ ದಂತೆ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 23 ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳೆಂದು ಗುರುತಿಸ ಲಾಗಿದೆ.ಒಟ್ಟು 1351
ಹಾಸಿಗೆಗಳನ್ನು ಕೋವಿಡ್ ರೋಗಿಗಳ ಸಲುವಾಗಿ ಕಾದಿರಿಸಲಾಗಿದೆ.ಇದರಲ್ಲಿ 811 ಆಕ್ಸಿಜನ್ ಹಾಸಿಗೆಗಳನ್ನು ಗುರುತಿಸಲಾಗಿದೆ.ಇದರಲ್ಲಿ 1030 ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಕೇಂದ್ರೀಕೃತ ಬೆಡ್ ಮ್ಯಾನೇಜ್ಮೆಂಟ್ ವ್ಯವಸ್ಥೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಬ್ಲಾಕ್ ಮಾಡಲು ಅಂದರೆ ಕಾಯ್ದಿರಿಸಲು ಅವಕಾಶಗಳನ್ನು ಮಾಡಿಕೊಡಲಾಗಿದೆ.
ಲೈನ್ ಲಿಸ್ಟ್ ಮೂಲಕ ಪೊಸಿಟಿವ್ ಪ್ರಕರಣಗಳನ್ನು ಗುರುತಿಸಿದಾಗ ಹಾಸಿಗೆ ಬೇಕಾದವರ ರೋಗಿಗಳಿಗೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಕಾಯ್ದಿರಿಸಬಹುದಾಗಿದೆ.
ಸಾರ್ವಜನಿಕರು, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ವಾರ್ ರೂಮಿನ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ಎಂಟ್ರಿ ಮಾಡಿ,ತಮ್ಮ ಮೊಬೈಲ್ ನಂಬರ್ ನ್ನು ಎಂಟ್ರಿ ಮಾಡಿದಾಗ ಓಟಿಪಿ ಬರುತ್ತದೆ.ಅದನ್ನು ಬಳಸಿಕೊಂಡು ತಮಗೆ ಬೇಕಾದಲ್ಲಿ ಹಾಸಿಗೆಗಳನ್ನು ಪಡೆಯಬಹುದಾಗಿದೆ.
ತದನಂತರ ಡಿ.ಎಚ್.ಓ.ಅವರು ಅಂಗೀಕರಿಸಿದಾಗ SAST ನಲ್ಲಿ ಸೌಲಭ್ಯವೂ ಕಂಡುಬರುತ್ತದೆ. ನಾಲ್ಕು ಘಂಟೆಗಳ ಕಾಲ ಕಾಯ್ದಿರಿಸಿದ
ಹಾಸಿಗೆಯು ಲಭ್ಯವಿರುತ್ತದೆ. ರೋಗಿಯು ಬರದಿದ್ದರೆ ಮೀಸಲಿಟ್ಟ ಹಾಸಿಗೆಯು ರದ್ದಾಗುತ್ತದೆ.