
ಬೆಳಗಾವಿ: ರಾಜ್ಯ ಸಾರಿಗೆ ಇಲಾಖೆಗೆ ಸುಮಾರು ೪ ಸಾವಿರ ಕೋಟಿ ನಷ್ಟ ಉಂಟಾಗಿದೆ. ಅದಕ್ಕೆ ಮುಖ್ಯ ಕಾರಣ, 20 ಜಿಲ್ಲೆಗಳಲ್ಲಿನ ಅತಿವೃಷ್ಟಿ ಹಾಗೂ ಕೋವಿಡ್ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯ ತಮ್ಮ ನಿವಾಸದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಕಾರ್ಯಚರಣೆ ಕುಂಠಿತವಾಗಿದೆ. ಅತಿವೃಷ್ಠಿ ಬಳಿಕ ಕೊರೋನಾ ಸಮಸ್ಯೆ, ಬಳಿಕ ಇಲಾಖೆ ಸಿಬ್ಬಂದಿ ಪ್ರತಿಭಟನೆ, ಬಳಿಕ ಮತ್ತೆ ಕೊರೋನಾ ಎರಡನೇ ಅಲೆ ಬಂದಿದ್ದರಿಂದ ಸರ್ಕಾರದಲ್ಲಿ ಹೆಚ್ಚು ನಷ್ಟ ಸಾರಿಗೆ ಇಲಾಖೆಗೆ ಆಗಿದೆ ಎಂದು ತಿಳಿಸಿದರು.
ಈಗ 50 ಪ್ರತಿಶತ ಜನ ಪ್ರಯಾಣಿಸಲು ಅವಕಾಶ ಇರುವುದರಿಂದ ಬರುವ ಆದಾಯ ಸಂಬಳ ಮತ್ತು ಇಂದನಕ್ಕೆ ಸಾಲುತ್ತಿಲ್ಲ. ಇನ್ನು ಮೂರು ನಾಲ್ಕು ತಿಂಗಳು ಹೆಚ್ಚು ಜನರಿಗೆ ಪ್ರಯಾಣಕ್ಕೆ ಅವಕಾಶ ಇಲ್ಲ. ಸರ್ಕಾರಕ್ಕೆ ನಷ್ಟವಾದರೂ ಜನರ ಆರೋಗ್ಯ ಮುಖ್ಯ ಎಂದು ತಿಳಿಸಿದರು.