ಬೆಳಗಾವಿ
ಬಿಜೆಪಿ ನಾಯಕರ ಕಿರುಕುಳ ಆರೋಪ; ರಾಜೀನಾಮೆ ನಿಡಲು ಮುಂದಾಗಿರುವ ವೈದ್ಯಕಿಯ ಸಿಬ್ಬಂದಿ?

ಬೆಳಗಾವಿ: ನಿಪ್ಪಾಣಿ ಪಟ್ಟಣದ ಗಾಂಧಿ ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸೇರಿ 43 ಸಿಬ್ಬಂದಿ, ರಾಜಕೀಯ ಮುಖಂಡರ ಕಿರುಕುಳಕ್ಕೆ ಬೇಸತ್ತು ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಪದೆ ಪದೆ ಅಲ್ಲಿಯ ರಾಜಕೀಯ ಮುಖಂಡರು ಕಿರುಕಳ ನೀಡುತ್ತಿದ್ದು ವ್ಯಾಕ್ಸಿನ್ ಟ್ರೀಟ್ಮೆಂಟ್ ವಿಷಯದಲ್ಲಿ ಅಧಿಕಾರಿಗಳಿಗೆ ರಾಜಕೀಯ ವ್ಯಕ್ತಿಗಳು ಹೀನಾಯವಾಗಿ ನಡೆಸುಕೊಳ್ಳುತ್ತಿದ್ದಾರೆ ಎಂದು ಬೆಸತ್ತು ಮುಖ್ಯ ವೈದ್ಯಾಧಿಕಾರಿ ಸೇರಿ 43 ಸಿಬ್ಬಂದಿಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ
ಪ್ರಮುಖವಾಗಿ ಕೋವಿಡ್ ವ್ಯಾಕ್ಸಿನೇಷನ್ ವಿಚಾರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಿಂದ ಕಿರುಕುಳದ ಆರೋಪ ನೀಡುತ್ತಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ ಸೇರಿ ಎಲ್ಲಾ ಸಿಬ್ಬಂದಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ರವಾನಿಸಿದ್ದಾರೆ