ಬೆಳಗಾವಿ

ಶಾಸಕರ ನಿಧಿಯಲ್ಲಿ ಹೈಟೆಕ್ ಅಂಬ್ಯುಲೆನ್ಸ್ ವಿತರಣೆ ಮಾಡಿದ ಡಿಸಿಎಂ ಸವದಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಗೆ ನೂತನವಾಗಿ ಖರೀದಿಸಿದ ಅಂಬ್ಯುಲೆನ್ಸ ವಾಹನವನ್ನು ಡಿಸಿಎಮ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಸ್ತಾಂತರಿಸಿದರು.

ನದಿ ಇಂಗಳಗಾಂವ ಮತ್ತು ಅಥಣಿ ತಾಲೂಕು ಆಸ್ಪತ್ರೆಗೆ ಖರೀದಿಸಿದ ಎರಡು ಅಂಬ್ಯುಲೆನ್ಸಗಳನ್ನು ವೈದ್ಯಾಧಿಕಾರಿ ಅವರಿಗೆ ಹಸ್ತಾಂತರ ಮಾಡಿದರು.ಈ ವೇಳೆ ಮಾತನಾಡಿದ ಅವರು ಬೆಳಗಾವಿ, ಮಿರಜ್,ವಿಜಯಪುರ,ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲು ಇಷ್ಟುದಿನ ಬೆಳಗಾವಿ ಮೀರಜ್ ಪಟ್ಟಣಗಳಿಂದ ಖಾಸಗಿ ಅಂಬ್ಯುಲೆನ್ಸ ತರಿಸಬೇಕಿತ್ತು ಅದಕ್ಕೆ ಹದಿನೈದು ಇಪ್ಪತ್ತು ಸಾವಿರ ಖರ್ಚು ಆಗುತ್ತಿತ್ತು.ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ನದಿ ಇಂಗಳಗಾಂವ,ಅಥಣಿ ಆಸ್ಪತ್ರೆಗಳಿಗೆ ಎರಡು ಅಂಬ್ಯುಲೆನ್ಸ ಕೊಟ್ಟಿದ್ದೇವೆ ಎಂದರು.

ಒಂದು ಅಂಬ್ಯುಲೆನ್ಸ ವೆಂಟಿಲೇಟರ್ ಹೊಂದಿದ ಸಂಪೂರ್ಣ ಸುಸಜ್ಜಿತ ವಾಹನವಾಗಿದ್ದು ಇನ್ನೊಂದರಲ್ಲಿ ಆಕ್ಸಿಜನ್ ಅಳವಡಿಸುವ ವ್ಯವಸ್ಥೆ ಇದೆ.ಐಸಿಯು ವ್ಯವಸ್ಥೆ ಇರುವ ಅಂಬ್ಯುಲೆನ್ಸ ತುರ್ತು ಸಂಧರ್ಭದಲ್ಲಿ ಬಳಕೆಯಾಗಲಿದೆ 2020-21 ನೇ ಸಾಲಿನ ಶಾಸಕರ ನಿಧಿಯನ್ನು ಈ ಖರೀದಿಗಾಗಿ ಬಳಕೆ ಮಾಡಲಾಗಿದ್ದು ಸಮುದಾಯ ಭವನಕ್ಕಿಂತ ಇದು ಜನರ ಜೀವ ಉಳಿಸಲು ಉಪಯುಕ್ತವಾಗಲಿದೆ.ಅಷ್ಟೇ ಅಲ್ಲದೆ ಸಕ್ಕರೆ ಕಾಯಿಲೆ ಇರುವ ಜನರ ಚಿಕಿತ್ಸೆ ದೃಷ್ಟಿಯಿಂದ ಎರಡು ಡಯಾಲಿಸಿಸ್ ಮಷೀನ್ ಗಳನ್ನು ಹೆಚ್ಚುವರಿ ಆಗಿ ಕೊಡುತ್ತಿದ್ದೇವೆ.ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಗಾಗಿ ಮೂರ ರಿಂದ ಮೂರುವರೆ ಸಾವಿರ ರೂಪಾಯಿ ಗಳಷ್ಟು ಹಣ ಖರ್ಚಾಗುವದನ್ನು ತಪ್ಪಿಸಲು ಬಡವರ ಅನುಕೂಲ ಕ್ಕಾಗಿ ಡಯಾಲಿಸಿಸ್ ಮಷೀನ್ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಅಥಣಿ ಗಚ್ಚಿನಮಠದ ಶಿವಸಬಸವ ಸ್ವಾಮೀಜಿ,ಅಥಣಿ ಡಿವೈ ಎಸ್ ಪಿ ಎಸ್ ವಿ ಗಿರೀಶ್, ಪಿಎಸ್ ಐ ಕುಮಾರ ಹಾಡಕಾರ ತಾಲೂಕು ವೈದ್ಯಾಧಿಕಾರಿ ಬಸಗೌಡ ಕಾಗೆ,ಆಸ್ಪತ್ರೆ ವೈದ್ಯಾಧಿಕಾರಿ ಬಿ ಜಿ ಕನಮಡಿ,ಡಾಕ್ಟರ್ ಸಂಜಿವ ಗುಂಜಿಗಾಂವಿ,ಡಾ ಸಿ ಎಸ್ ಪಾಟೀಲ,ಡಾ ಪ್ರಕಾಶ ರಾಚಗೌಡರ, ಪ್ರಕಾಶ ನರಟ್ಟಿ, ಮತ್ತು ಆಸ್ಪತ್ರೆ ಸಿಬ್ಬಂದಿ ಹಾಗೂ ರಾಮಣ್ಣ ಧರಿಗೌಡರ,ಪ್ರದೀಪ ನಂದಗಾಂವ,ಅರುಣ ಬಾಸಿಂಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button