ಬೆಳಗಾವಿ
ಬೆಳಗಾವಿಯಲ್ಲಿ ತುಟಿ ಬಿಚ್ಚದ ಈಶ್ವರಪ್ಪ; ಸ್ಥಳೀಯ ನಾಯಕರ ಭೇಟಿಗೆ ಸಿದ್ಧತೆ

ಬೆಳಗಾವಿ: ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.ರಾಜ್ಯ ಬಿಜೆಪಿ ಉಸ್ತುವಾರಿ ಬೆಂಗಳೂರಿಗೆ ಬಂದಿದ್ದಾರೆ. ಈ ನಡುವೆ ಸಚಿವ ಈಶ್ವರಪ್ಪ ಇವತ್ತು ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಬೆಳಗಾವಿಯ ಸರ್ಕ್ಯುಟ್ ಹೌಸ್ ಗೆ ಆಗಮಿಸಿದ ಈಶ್ವರಪ್ಪ, ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸದೇ ಗಪ್ ಚುಪ್ ಆಗಿದ್ದಾರೆ.
ಇಲಾಖೆಯ ಪರಿಶೀಲನೆಗೆ ಬೆಳಗಾವಿಗೆ ಬಂದಿದ್ದು ಸಂಜೆ ತುರ್ತಾಗಿ ಬೆಂಗಳೂರಿಗೆ ವಾಪಸ್ ಹೋಗುತ್ತೇನೆ. ನಾಳೆ ಸಂಜೆ ಐದು ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಬೆಳಗಾವಿಯಲ್ಲಿಂದು ಸಭೆ ಮುಗಿಸಿ ನಾಳೆ ಕೋರ್ ಕಮೀಟಿ ಸಭೆ ಹಾಜರಾಗುವೆ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ ಪ್ರತಿಕ್ರಿಯಿಸದೇ ತೆರಳಿದರು.