ಬೆಳಗಾವಿ
ಬಾಕಿ ಬಿಲ್ ಪಾವತಿಸದ್ದಕ್ಕೆ ನಿವೃತ್ತ ಯೋಧನ ಶವ ನೀಡದ ಖಾಸಗಿ ಆಸ್ಪತ್ರೆ

ಬೆಳಗಾವಿ: ಬಾಕಿ ಬಿಲ್ ಪಾವತಿಸದ್ದಕ್ಕೆ ಕೋವಿಡ್ ನಿಂದ ಮೃತಪಟ್ಟ ನಿವೃತ್ತ ಯೋಧನ ಶವ ನೀಡದೇ, ಬಿಜೆಪಿ ಮುಖಂಡನ ಒಡೆತನದ ನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಪ್ರದರ್ಶಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಮೃತದೇಹ ನೀಡದ ಇದ್ದಿದ್ದರಿಂದ ಮೃತದೇಹ ಪಡೆಯಲು ಯೋಧನ ಕುಟುಂಬಸ್ಥರು ಪರದಾಡುವಂತಾಗಿದೆ. “ಈಗ ಮೃತದೇಹ ಕೊಡಿ, ಅಂತ್ಯಸಂಸ್ಕಾರದ ನಂತರ ನಿಮ್ಮ ಹಣ ಪಾವತಿಸುತ್ತೇವೆ ಎಂದು ಬೇಡಿಕೊಂಡರು ಕೂಡ ಆಸ್ಪತ್ರೆಯ ಆಡಳಿತ ಮಂಡಳಿ ಮೃತದೇಹವನ್ನು ನೀಡುತ್ತಿಲ್ಲ” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯೇ ಎದುರು ಮೃತರ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ 3,10,000 ರೂ. ಹಣ ಪಾವತಿಸಿದರೂ ಕೂಡ, ಮತ್ತೆ 3,63,000 ಹಣ ಪಾವತಿಸುವಂತೆ ಆಸ್ಪತ್ರೆಯವರು ಹೇಳುತ್ತಿದ್ದಾರೆ” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.