ಬೆಳಗಾವಿ
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಒತ್ತಾಯ; ಒಂಟೆ ಮೇಲೆ ಬೆಂಬಲಿಗರ ಮೆರವಣಿಗೆ

ಬೆಳಗಾವಿ: ರಮೇಶ ಜಾರಕಿಹೋಳಿಯವರಗೆ ಮತ್ತೆ ಸಚಿವ ಸ್ಥಾನ ನೀಡಬೇಕೆಂದು ಬೆಳಗಾವಿಯಲ್ಲಿ ಅಶೋಕ ಅಸೂಂಡೆ ನೇತೃತ್ವದಲ್ಲಿ ದಲಿತ ಕ್ರಾಂತಿ ಸೇನೆ ಮತ್ತು ಗೋಕಾಕಿನ ರಮೇಶ್ ಜಾರಕಿಹೋಳಿ ಅಭಿಮಾನಿ ಬಳಗದ ಕಾರ್ಯಕರ್ತರು ಒಂಟೆ ಮೇಲೆ ಮೆರವಣಿಗೆ ನಡೆಸಿದರು.
ರಮೇಶ ಜಾರಕಿಹೋಳಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ, ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾದಕ್ಷಕರಿಗೆ ಮನವಿ ಸಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ ಅಸೂಂಡೆ, ರಮೇಶ ಜಾರಕಿಹೋಳಿಯವರು ಬೆಳಗಾವಿ ಲೊಕಸಭಾ ಉಪಚುನಾವಣೆಯಲ್ಲಿ ಮನೆಯಲ್ಲಿಯೆ ಕುಳಿತು ಕಾರ್ಯಕರ್ತರಿಗೆ ಹೇಳಿ ಸಾವಿರಾರು ಮತಗಳ ಅಂತರದಿಂದ ಬಿಜೆಪಿಯನ್ನು ಗೆಲ್ಲಿಸಿದ್ದು ಮರೆಯುವ ಹಾಗಿಲ್ಲ. ಅದಕ್ಕಾಗಿ ಮತ್ತೆ ರಮೇಶಯವರಿಗೆ ಸಚಿವ ಸ್ಥಾನ ನೀಡಬೇಕೆಂದರು