ಕೋವಿಡ್ ನಡುವೆ ಕುರ್ಚಿ ಕಾಳಗ ಬೇಕಿತ್ತಾ?; ಎಸ್ ಎಲ್ ಭೋಜೇಗೌಡ ವ್ಯಂಗ್ಯ

ಚಿಕ್ಕಮಗಳೂರು: ಕೋವಿಡ್ ನಿಯಂತ್ರಣದ ಕಡೆಗೆ ಹೆಚ್ಚು ಗಮನ ಹರಿಸಬೇಕಾದ ಈ ಸಂದರ್ಭದಲ್ಲಿ ಸರ್ಕಾರದೊಳಗೆ ಕುರ್ಚಿ ಕಾಳಗ ಬೇಕಿತ್ತಾ ಎಂದು ಎಂಎಲ್ಸಿ ಎಸ್.ಎಲ್. ಬೋಜೇಗೌಡ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠೀಯಲ್ಲಿ ಅವರು ಮಾತನಾಡಿ, ಅಧಿಕಾರಕ್ಕಾಗಿ ಕಿತ್ತಾಟ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸೇರಿ ಸರ್ಕಾರ ರಚಿಸಿರುವುದರಿಂದ ಮಂತ್ರಿಯೊಬ್ಬರು ಮೂರು ಪಕ್ಷದ ಸರ್ಕಾರ ಎಂದು ಹೇಳಿರುವುದರಲ್ಲಿ ಅರ್ಥವಿದೆ. ಬಹುತೇಕ ಶಾಲಾ ಶಿಕ್ಷಕರಿಗೆ ವ್ಯಾಕ್ಸಿನ್ ನೀಡಿಲ್ಲ., ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಇತ್ಯಾದಿ ಯೋಜನೆಗಳಿಗೆ ಅನುದಾನ ಖರ್ಚಾಗಿಲ್ಲ.ಯಾವ ಧೈರ್ಯದಲ್ಲಿ ಶಿಕ್ಷಕರು ಶಾಲೆಯತ್ತ ಹೋಗಬೇಕು ಎಂದು ಪ್ರಶ್ನಿಸಿರುವ ಅವರು ಪ್ರತೀನಿತ್ಯ 250 ಶಿಕ್ಷಕರಿಗೆ ವ್ಯಾಕ್ಸಿನ್ ನೀಡಲಿ ಎಂದು ಆಗ್ರಹಿಸಿದ್ದಾರೆ.
ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ತಾಲೂಕು ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಿಲ್ಲ. ಸಾಕಷ್ಟು ಮಂದಿ ಕೋವಿಡ್ ಪಾಸಿಟೀವ್ ಬಂದಾಗ ಹೊರ ಜಿಲ್ಲೆಗಳಿಗೆ ಹೋಗಿ ಮೃತರಾಗಿದ್ದಾರೆ. ಅದರ ಲೆಕ್ಕವೇ ಸಿಗದಂತಾಗಿದೆ ಎಂದರು.