ಜಿಲ್ಲಾ ಸುದ್ದಿ
ಹುಟ್ಟುಹಬ್ಬಕ್ಕೆ ಪಾರ್ಟಿ; ಬಸ್ಕಿ ಹೊಡೆಸಿದ ಪೋಲೀಸರು

ರಾಮನಗರ: ಕೊರೊನಾ ನಡುವೆಯೂ ಹಲವಾರು ಕಾಲೇಜು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ನಿಯಮ ಉಲ್ಲಂಘಿಸಿ, ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಪಾರ್ಟಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅಕ್ಕೂರು ಪೋಲೀಸರು ಹಿಡಿದು ತಂದು ಠಾಣೆಯ ಮುಂಭಾಗ ಬಸ್ಕಿ ಹೊಡೆಸಿ, ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ನಡೆದಿದೆ.
ಚನ್ನಪಟ್ಟಣ ಮತ್ತು ರಾಮನಗರದ ಕಾಲೇಜಿನ ವಿದ್ಯಾರ್ಥಿಗಳು ಓರ್ವ ಸ್ನೇಹಿತನ ಬರ್ತ್ ಡೇ ಆಚರಿಸಿಕೊಳ್ಳಲು, ಬೈಕ್ ಗಳಲ್ಲಿ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ ತೋಟವೊಂದಕ್ಕೆ ತೆರಳಿದ್ದರು. ಮಾಹಿತಿ ಆಧರಿಸಿ ಗ್ರಾಮಾಂತರ ಪೋಲಿಸ್ ಠಾಣೆಯ ಸಿಪಿಐ ಟಿ ಬಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್ಐ ಸರಸ್ವತಿ ಮತ್ತು ಸಿಬ್ಬಂದಿಗಳು ತೆರಳಿ, ಠಾಣೆಗೆ ಕರೆತಂದರು.
ಯಾವುದೇ ಅಹಿತಕರ ಘಟನೆ ನಡೆಯದ ಕಾರಣ ಹಾಗೂ ಎಲ್ಲರೂ ವಿದ್ಯಾರ್ಥಿಗಳು ಆದ ಹಿನ್ನೆಲೆಯಲ್ಲಿ, ಬಸ್ಕಿ ಹೊಡೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.