ಜಿಲ್ಲಾ ಸುದ್ದಿ

ಲಸಿಕಾ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರ ದರ್ಬಾರ್: ಕಾಂಗ್ರೆಸ್ ಆರೋಪ

ಮಂಗಳೂರು : ಜಿಲ್ಲೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ಬಿಜೆಪಿಯ ಕಾರ್ಯಕರ್ತರು ದರ್ಬಾರು ನಡೆಸುತ್ತಿದ್ದು, ಇದರಿಂದ ಲಸಿಕೆಗಾಗಿ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಅವರು ಮಾಧ್ಯಮದವರೊಂದಿಗೆ ಮಾತನಾಡಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನು ಸರಿಪಡಿಸಲು ವಿವಿಧ ಇಲಾಖೆಗಳಲ್ಲಿ ರಜೆಯಲ್ಲಿರುವ ಅಧಿಕಾರಿ ಗಳನ್ನು ನಿಯೋಜಿಸಬೇಕು. ಲಸಿಕೆ ವಿಷಯದಲ್ಲಿ ಬಿಜೆಪಿ ಶಾಸಕರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.

ಲಸಿಕೆ ಕುರಿತಾಗಿ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿರುವು ದರಿಂದ ಜನ ಬೆಳಿಗ್ಗೆ 3 ಗಂಟೆಗೆ ಲಸಿಕಾ ಕೇಂದ್ರಕ್ಕೆ ಸೇರುತ್ತಾರೆ ಎಂಬ ಆರೋಪವನ್ನು ಶಾಸಕರು ಮಾಡಿದ್ದಾರೆ.ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿದ್ದಲ್ಲ.ಜನರಿಗೆ ಲಸಿಕೆ ನೀಡಲು ಯೋಗ್ಯತೆ ಇಲ್ಲದೆ ಪ್ರತಿಯೊಂದು ವಿಚಾರ ದಲ್ಲೂ ಕಾಂಗ್ರೆಸ್ ಮೇಲೆ ಬೊಟ್ಟು ಮಾಡುವ ಮೂಲಕ ಕನಸಿನಲ್ಲೂ ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಕನವರಿಸುತ್ತಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಿಜೆಪಿಯ ಶಾಸಕರು ಲಸಿಕೆ ದಂಧೆ, ಶಾಸಕರ ಆಪ್ತರೊಬ್ಬರು ಬೆಡ್ ದಂಧೆಯಲ್ಲಿ ಭಾಗಿಯಾಗಿರು ವುದರಿಂದ ಪ್ರತಿಯೊಂದರಲ್ಲೂ ಭ್ರಷ್ಟಾಚಾರದ ಸಂಶಯ ಕಾಣುತ್ತಿದೆ.ಮೋದಿ ಅಧಿಕಾರಕ್ಕೆ ಬಂದರೆ ಭ್ರಷ್ಟರನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದರು. ಇದೀಗ ಭ್ರಷ್ಟರೆಲ್ಲ ಸಾಲು ಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಲಸಿಕೆ ಕೊರತೆ ಕುರಿತಂತೆ ಕಾಂಗ್ರೆಸ್ ಆಂದೋಲನ ನಡೆಸಲಿದ್ದು,ಜೂ.4ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಲಿದೆ.ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸಬೇಕು.ಲಸಿಕಾ ಕೇಂದ್ರಗಳಲ್ಲಿ ಗೊಂದಲ ಆಗದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಲಾಗು ವುದು ಎಂದು ಹರೀಶ್ ಕುಮಾರ್ ಹೇಳಿದರು.

ಸ್ಮಾರ್ಟ್ ಸಿಟಿಯಾದರೂ ಕ್ಲೀನ್ ಸಿಟಿ ಆಗಿಲ್ಲ !

ಬಹುತೇಕ ಅವಧಿಗೆ ಕಾಂಗ್ರೆಸ್ ಆಡಳಿತದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿಗಳನ್ನು ಪಡೆದಿತ್ತು.ಆದರೆ ಇದೀಗ ಸ್ಮಾರ್ಟ್ ಸಿಟಿಯಾಗುವ ಹಂತದಲ್ಲಿದ್ದರೂ ಕ್ಲೀನ್ ಸಿಟಿಯಾಗಿ ಉಳಿದಿಲ್ಲ.ತ್ಯಾಜ್ಯ ನಿರ್ವಹಣೆ ನಗರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.

ಮಾಜಿ ಶಾಸಕ ಜೆ.ಆರ್. ಲೋಬೋ,ಮುಖಂಡರಾದ ಅಬ್ದುಲ್ ರವೂಫ್,ಶಶಿಧರ ಹೆಗ್ಡೆ,ವಿಶ್ವಾಸ್ ಕುಮಾರ್ ದಾಸ್,ನವೀನ್ ಡಿಸೋಜಾ, ಭಾಸ್ಕರ ಕೆ.,ಪ್ರವೀಣ್ ಚಂದ್ರ ಆಳ್ವ,ಕೇಶವ ಮರೋಳಿ, ಅನಿಲ್ ಕುಮಾರ್,ಸಲೀಂ, ಶುಭೋದಯ ಆಳ್ವ, ಸಂಶುದ್ದೀನ್,ಟಿ.ಕೆ.ಸುಧೀರ್, ಅಶ್ರಫ್,ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button