ಚಿಕ್ಕಮಗಳೂರು
ಮಳೆ ಅಬ್ಬರ; ಮಲೆನಾಡು ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳಸ-ಹೊರನಾಡು ಭಾಗದಲ್ಲಿ ಭದ್ರಾನದಿ ತುಂಬಿ ಹರಿಯುತ್ತಿದೆ. ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ.
ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಸಹಿತ ಕೊಚ್ಚಿಹೋಗಿವೆ. ಶಿಥಿಲಾವಸ್ಥೆಯಲ್ಲಿರುವ ಹೆಬ್ಬಾಳ ಸೇತುವೆಯಲ್ಲಿ ನೀರಿನ ರಭಸಕ್ಕೆ ಸ್ತಂಭಗಳಿಗೆ ಮತ್ತಷ್ಟು ಹಾನಿಯಾಗಿರಬಹುದು. ಹೀಗಾಗಿ ಸಂಬಂಧಿಸಿದ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಿ. ಹೆಬ್ಬಾಳ ಸೇತುವೆ ಹೊಸದಾಗಿ ಬದಲಿ ನಿರ್ಮಾಣವಾಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು. ಸೇತುವೆ ಮುಳುಗಿದ್ದು ಸುಮಾರು 10 ಕಿಮೀಯಷ್ಟು ದೂರದವರೆಗೆ ಜನ ತೊಂದರೆ ಅನುಭವಿಸುವಂತಾಗಿದೆ. ದೇವಸ್ಥಾನವಿದೆ. ರಾತ್ರಿವೇಳೆ ನೀರು ರಸ್ತೆಯಲ್ಲಿ ಹರಿಯುವಾಗ ವಾಹನ ಸಂಚಾರಿಗರಿಗೆ ಕಾಣಿಸುವುದಿಲ್ಲ. ಜನರ ಓಡಾಟ ಜಾಸ್ತಿ ಇರುತ್ತದೆ. ಇಲ್ಲಿ ಸ್ಟ್ರೀಟ್ ಲೈಟ್ ಹಾಕಿ, ಬ್ಯಾರಿಕೇಡ್ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.