ಚಿಕ್ಕಮಗಳೂರುವಾಣಿಜ್ಯ
ದುಬಾರಿ ದುನಿಯಾ; ಎಸ್ಬಿಐ ಗ್ರಾಹಕರಿಗೆ ಬರೆ

ಚಿಕ್ಕಮಗಳೂರು: ಕೋವಿಡ್ ಸಂಕಷ್ಟ ಒಂದೆಡೆಯಾದರೆ, ದುಬಾರಿ ದುನಿಯಾದಲ್ಲಿ ಜನ ಮತ್ತಷ್ಟು ಹೈರಾಣಾಗುವಂತಾಗಿದೆ. ಎಸ್.ಬಿ.ಐ ಬ್ಯಾಂಕಿನ ಗ್ರಾಹಕರಿಗೆ ಎಟಿಎಂ ಮತ್ತು ಚೆಕ್ ಪುಸ್ತಕಗಳ ಶುಲ್ಕ ಹೆಚ್ಚಾಗಲಿದೆ. ಪರಿಷ್ಕೃತ ದರ ಜು.1ರಿಂದ ಜಾರಿಯಾಗಲಿದೆ.
ಎಟಿಎಂ ಅಥವಾ ಬ್ಯಾಂಕ್ ಖಾತೆ ಮೂಲಕ ತಿಂಗಳಿಗೆ 4 ಬಾರಿ ಮಾತ್ರ ಶುಲ್ಕವಿಲ್ಲದೆ ಹಣ ಪಡೆಯಬಹುದು. ನಂತರ ಪ್ರತೀ ಬಾರಿ ರೂ.15 ಶುಲ್ಕ ಮತ್ತು ಜಿಎಸ್ಟಿ ಪಾವತಿಸಬೇಕು. 10ಕ್ಕಿಂತ ಹೆಚ್ಚು ಚೆಕ್ ಗಳು ಬೇಕಾದಲ್ಲಿ ಶುಲ್ಕ ಕಟ್ಟಬೇಕು. ಹೆಚ್ಚುವರಿ 10ಚೆಕ್ ಗೆ ರೂ.40 ಹಾಗೂ 25 ಚೆಕ್ ಗಳಿಗೆ ರೂ.75, ತುರ್ತಾಗಿ 10ಚೆಕ್ ಪಡೆಯಲು 50 ರೂ ಮತ್ತು ಜಿಎಸ್ಟಿ ಪಾವತಿಸಬೇಕು.