ಸಿಎಂ ಬಿಎಸ್ವೈ ರಾಜಿನಾಮೆ ಕೊಡ್ತೀನಿ ಎಂದಿಲ್ಲ; ನಳೀನ್ ಕುಮಾರ್ ಕಟೀಲ್ ಹೇಳಿಕೆ

ಬಾಗಲಕೋಟೆ: ಹೈಕಮಾಂಡ್ ಸೂಚಿಸಿದರೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತೀನಿ ಹೇಳಿಕೆಗೆ ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಸಿಎಂ ರಾಜೀನಾಮೆ ಕೊಡ್ತೇನೆ ಅಂತಾ ಹೇಳಿಲ್ಲ. ನಮ್ಮ ಪಕ್ಷ ವಿಭಿನ್ನವಾಗಿರುವಂತಹ ಪಕ್ಷ.ನಾವೆಲ್ಲರೂ ಹಿರಿಯರು ಏನು ಸೂಚನೆ ಕೊಡ್ತಾರೆ ಅದನ್ನ ಪಾಲಿಸ್ತೀವಿ. ರಾಷ್ಟ್ರೀಯ ನಾಯಕರು, ಹೈಕಮಾಂಡ್ ಸೂಚನೆ ಕೊಟ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ದಾರೆ. ಅದು ಒಬ್ಬ ಆದರ್ಶ ಕಾರ್ಯಕರ್ತನ ಲಕ್ಷಣ ಎಂದರು.
ಎಲ್ಲ ಕಾರ್ಯಕರ್ತರಿಗೂ ಪ್ರೇರಣೆ ಆಗುವ ರೀತಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಪಾರ್ಟಿಯ ಚರ್ಚೆಯಲ್ಲಿಯಾಗಲಿ, ನಮ್ಮ ಶಾಸಕಾಂಗ ಪಕ್ಷದ ಚರ್ಚೆಯಲ್ಲಾಗಲಿ, ಕೋರ್ ಕಮಿಟಿ ಚರ್ಚೆಯಲ್ಲಾಗಲಿ ಎಲ್ಲೂ ಕೂಡಾ ನಾಯಕತ್ವ ಬದಲಾವಣೆ ಚರ್ಚೆ ಆಗಿಲ್ಲ. ನಮ್ಮಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯ ಇದೆಲ್ಲ ಇಲ್ಲ, ಆ ಪದ್ದತಿಯೂ ಇಲ್ಲ. ಹೈಕಮಾಂಡ್ ಇದೆ, ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ತಿರ್ಮಾನ ತೆಗೆದುಕೊಳ್ತಾರೆ. ಆ ತೀರ್ಮಾನಗಳಿಗೆ ನಾವು ಬದ್ಧರಾಗಿರ್ತೇವೆ ಎಂದರು.
ಇಂತಹ ಸಹಿ ಸಂಗ್ರಹಗಳು ನಮ್ಮ ಪಾರ್ಟಿಯಲ್ಲಿ ಇಲ್ಲ. ಶಿಸ್ತು ಸಮಿತಿ ರಚನೆ ಆಗಿದೆ ಎಂಬ ಪ್ರಶ್ನೆಗೆ.ಅಧಿಕಾರ ಇದ್ದಾಗ ನೋವುಗಳು, ಭಾವನೆಗಳನ್ನು ವ್ಯಕ್ತಪಡಿಸಬೇಕೆನ್ನುವುದು ಸಹಜ.ಅದಕ್ಕಾಗಿ ಈಗಾಗಲೇ ಒಂದು ತಂಡ ರಚನೆ ಮಾಡಿದ್ದೇವೆ. ಮುಂದಿನ ಚುನಾವಣೆಗಳು ಈ ರೀತಿಯ ಭಾವನೆಗಳನ್ನು ತೋಡಿಕೊಳ್ಳಬೇಕೆಂದ್ರೆ.ಅದಕ್ಕೋಸ್ಕರ ತಂಡ ಕೂತು ಚರ್ಚೆ ಮಾಡಿ ರಾಜಕೀಯ ಯೋಚನೆ, ಯೋಜನೆಗಳಿಗಾಗಿ ಮಾಡಿದ್ದೇವೆ.ಪ್ರತಿ ತಿಂಗಳು ಆ ಸಮಿತಿ ಸೇರುತ್ತೆ ಎಂದು ಹೇಳಿದರು.