ಜಿಲ್ಲಾ ಸುದ್ದಿ
ನೋವಿನಿಂದ ಸಿಎಂ ರಾಜೀನಾಮೆ ವಿಷಯ ಮಾತನಾಡಿದ್ದಾರೆ; ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ

ಬೆಳಗಾವಿ: ಸಿಎಂ ರಾಜೀನಾಮೆ ಹೇಳಿಕೆ ವಿಚಾರವಾಗಿ ಇಂದು ಅಥಣಿಯಿಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ
ಮುಖ್ಯಮಂತ್ರಿ ಗಳಿಗೆ ಮನಸ್ಸಿಗೆ ನೋವಾಗಿರುವುದಕ್ಕೆರಾಜೀನಾಮೆ ವಿಷಯ ಮಾತನಾಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕೆಲವರು ಅನೇಕ ದಿನಗಳಿಂದ ಪದೆ ಪದೆ ಈ ವಿಚಾರ ಬರ್ತಾ ಇದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವಿಷಯ ವಿನಾಕಾರಣ ಚರ್ಚೆ ಅಗುತ್ತಿದೆ. ಆದ್ದರಿಂದ ಸಿಎಂ ಯಡಿಯೂರಪ್ಪನವರಿಗೆ ಬೇಜಾರಾಗಿ ರಾಜಿನಾಮೆ ವಿಷಯ ಮಾತನಾಡಿದ್ದಾರೆ ,ಸಿಎಂ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.
ಉತ್ತರ ಕರ್ನಾಟಕದವರು ಸಿಎಂ ಆಗಬೆಕೆಂದು ಎಚ್ ವಿಶ್ವನಾಥ ಹೇಳಿಕೆ ವಿಚಾರಕ್ಕೆ ಉತ್ತರಿಸುತ್ತಾ ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧಿವಿಲ್ಲ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ ರಾಷ್ಟ್ರೀಯ ನಾಯಕರು ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ಸವದಿ ಹೇಳಿದ್ದಾರೆ.