ಜಿಲ್ಲಾ ಸುದ್ದಿ

ಮ್ಯಾನ್​ಹೋಲ್ ದುರಂತ; ಮೃತರ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ

ರಾಮನಗರ: ಇಲ್ಲಿನ ಐಜೂರು ಬಡವಾಣೆಯ ಬಳಿ ಇರುವ ನೇತಾಜಿ ಪಾಪ್ಯುಲರ್ ಶಾಲೆ ಮುಂಭಾಗ ಜೂನ್ 4 ರಂದು ಮ್ಯಾನ್ ಹೋಲ್ ದುರಸ್ತಿಗೆ ಇಳಿದಯ ಮೂರು ಕಾರ್ಮಿಕರು ಮೃತಪಟ್ಟಿದ್ದು, ಅವರಿಗೆ ಇಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ವೆಂಕಟೇಶನ್ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ‌ ಶಿವಣ್ಣ‌ ಇಂದು ಜಿಲ್ಲಾಧಿಕಾರಿಗಳ ಕಚೇರಿ‌ ಸಭಾಂಗಣದಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.

ಘಟನೆಯಲ್ಲ ಮೃತಪಟ್ಟ ಮಂಜುನಾಥ್ (32) ಮತ್ತು ಮಂಜುನಾಥ್ (30) ಎಂಬ ಇಬ್ಬರು ವ್ಯಕ್ತಿಯ ಕುಟುಂಬದ ವರ್ಗದವರಿಗೆ ಚೆಕ್ ವಿತರಿಸಿದ್ದು, ರಾಜೇಶ್ ಎಂಬ ವ್ಯಕ್ತಿಯ ಕುಟುಂಬ ವರ್ಗದವರನ್ನು ಸರಿಯಾಗಿ ಗುರುತಿಸಿ ಪರಿಶೀಲಸಿ ನಂತರ ಅವರಿಗೆ ಪರಿಹಾರ ಚೆಕ್ ನೀಡಲಾಗುವುದು ಎಂದರು.

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ ವೆಂಕಟೇಶನ್ ಅವರು ಮಾತನಾಡಿ ಘಟನೆ ಗಮನಕ್ಕೆ ಬಂದ ತಕ್ಷಣ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಗುತ್ತಿಗೆದಾರರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

‌‌‌‌‌ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಅವರು ಮಾತನಾಡಿ ಮ್ಯಾನ್ ಹೋಲ್ ನಲ್ಲಿ ಕೆಲಸ ಮಾಡಲು ಇಳಿದು 3 ಜನ ಕಾರ್ಮಿಕರು ಸಾವನ್ನಪ್ಪಿರುವುದು ವಿಷಾದನೀಯ ವಿಷಯ. ಮ್ಯಾನ್ ಹೋಲ್ ನಲ್ಲಿ ಯಾರನ್ನು ಕೂಡ ಇಳಿಸಬಾರದು ಇಂದು ತುಂಬ ಆಧುನಿಕ ಯಂತ್ರಗಳಿವೆ ಅವನ್ನು ಬೆಳಸಿಕೊಳ್ಳಬೇಕು ಎಂದರು.

ಈ ಘಟನೆಯ ಹಿನ್ನೆಲೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಸೂಚನೆ ನೀಡಲಾಗುವುದು. ಮೃತಪಟ್ಟ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಘಟನೆಯಲ್ಲಿ ಮೃತಪಟ್ಟವರು ಅಟ್ರಿಸಿಟಿ ವ್ಯಾಪ್ತಿಗೆ ಬಂದಲ್ಲಿ ಅದರಡಿ ನೀಡಲಾಗುವ ಪರಿಹಾರವನ್ನು ಸಹ ಒದಸಿಸಲಾಗುವುದು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button