ಕಾಂಗ್ರೆಸ್ ಆರೋಗ್ಯ ಸಹಾಯ ಹಸ್ತ

ಕಾರವಾರ : ಇಂದು ಶಿರಸಿಯ ಪಂಡಿತ್ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ದಾನಿಗಳಿಂದ ನಡೆಯುತ್ತಿರುವ ನಿತ್ಯ ಅನ್ನದಾನ ಕಾರ್ಯಕ್ರಮವನ್ನು ಇವತ್ತಿನ ದಾನಿಗಳಾದ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಶಿ,ನಗರಸಭಾ ಸದಸ್ಯ ಶ್ರೀಕಾಂತ್ ತಾರಿಬಾಗಿಲ ಅವರು ಚಾಲನೆ ನೀಡಿದರು.
ಶಿರಸಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಮೇಶ ದುಬಾಶಿ,ಶಿರಸಿ ನಗರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶ್ರೀಕಾಂತ ತಾರೀಬಾಗಿಲ ನೇತೃತ್ವದಲ್ಲಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲ್ಪಟ್ಟ ರೋಗಿಗಳು, ಅವರ ಸಹಾಯಕರಿಗೆ,ಆಸ್ಪತ್ರೆ ಗಳ ಸಹಾಯಕರಿಗೆ ನಿತ್ಯ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಹಾರ,ನೀರು, ಹಣ್ಣು,ತಂಪು ಪಾನೀಯ ವಿತರಿಸಿದರು.
ಸುರಕ್ಷತಾ ಕ್ರಮಗಳು ಜಾರಿಯಲ್ಲಿರುವ ಶಿರಸಿಯ ಆರಕ್ಷಕ ಇಲಾಖೆಯ ಸಿಬ್ಬಂದಿ ಗಳಿಗೆ ತಂಪು ಪಾನೀಯ ಮತ್ತು ಹಣ್ಣುಗಳನ್ನು ನೀಡಿದರು.
ಅಶೋಕ ಯಾತಗಿರಿ,ಗಣೇಶ ದಾವಣಗೇರಿ,ಶ್ರೀಪಾದ ಹೆಗಡೆ ಕಡವೆ,ವಿನಾಯಕ ಹೆಗಡೆ, ಶ್ರೀಧರ ಹಲ್ಲುಸರಿಗೆ, ಅರ್ಜುನ್ ನಾಯ್ಕ,ಲಿಂಗಪ್ಪ ಕೊಂಡ್ಲಿ ಅವರು ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.