ಕಲೆಜಿಲ್ಲಾ ಸುದ್ದಿವಿಶೇಷ

ಸುಗ್ಗಿ ಉತ್ಸವಗಳಿಗೆ ಕೊರೋನಾ ಬ್ರೇಕ್; ಮನೆಯಲ್ಲೇ ಹಬ್ಬ ಆಚರಿಸಿದ ಗ್ರಾಮಸ್ಥರು

ಬರಹ: ಕಿರುಗುಂದ ರಫೀಕ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುಗ್ಗಿಹಬ್ಬಬಂತೆಂದರೆ ಮನೆಮನೆಗಳಲ್ಲಿ ಸಂಭ್ರಮ, ಸಡಗರ ಏರ್ಪಡುತ್ತಿತ್ತು. ಆದರೆ ಚೀನಿ ವೈರಸ್ಸಿನ ಕಾಟದಿಂದಾಗಿ ಸುಗ್ಗಿ ಉತ್ಸವಗಳಿಗೆ ಕಳೆದ ವರ್ಷದಿಂದಎರಡು ಬಾರಿ ಬ್ರೇಕ್ ಬಿದ್ದಂತಾಗಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ಸಾಂಕೇತಿಕವಾಗಿ ಹಬ್ಬಆಚರಿಸಿದ್ದಾರೆ.

ಬಡವ-ಬಲ್ಲಿದನೆನ್ನದೆ ಪ್ರತಿಯೊಬ್ಬರಮನೆಯಲ್ಲೂಒಂದೇ ತೆರನಾಗಿ ಆಚರಿಸುವ ಹಬ್ಬವಿದು.ಮನೆಯೊಳಗಿನ ಮಡಿಕೆ, ಪಾತ್ರೆ, ಹಾಸಿಗೆ ಎಲ್ಲವನ್ನೂಹೊರಹಾಕಿ ಇಡೀ ಮನೆಯನ್ನೇಶುಭ್ರಗೊಳಿಸಲಾಗುತ್ತದೆ. ಹಾಸಿಗೆಯ ಬದಲುಚಾಪೆಯಲ್ಲಿ ಮಲಗಬೇಕು. ಪಾದರಕ್ಷೆಗಳನ್ನುಧರಿಸುವಂತಿಲ್ಲ. ಎಲ್ಲರೂ ಬಿಳಿ ವಸ್ತç ಧರಿಸಬೇಕು.ಮಾಂಸಾಹಾರವನ್ನು ತ್ಯಜಿಸಿ ಹುಳಿಸಾರು ಅನ್ನಸೇವಿಸುವುದು ಪದ್ಧತಿಯಾಗಿದೆ.

ಮೂಡಿಗೆರೆ ತಾಲೂಕಿನ ಕೋಳೂರು ಸಾವಿರವ್ಯಾಪ್ತಿಯಲ್ಲಿರುವ ಫಲ್ಗುಣಿ, ಬೆಟ್ಟಗೆರೆ, ಸಬ್ಬೇನಹಳ್ಳಿ,ಕೋಳೂರು, ಬಡವನದಿಣ್ಣೆ, ಹೊರಟ್ಟಿ, ಬಕ್ಕಿ ಕೆಂಜಿಗೆ, ಭಾರತೀಬೈಲು, ಬಿ.ಹೊಸಹಳ್ಳಿ, ಬಾನಹಳ್ಳಿ,ಬೆಳಗೋಡು, ಕನ್ನಗೆರೆ ಗ್ರಾಮಸ್ಥರು ಸೇರಿ ಸುಗ್ಗಿಹಬ್ಬಆಚರಿಸುತ್ತಾರೆ. ಇಲ್ಲಿ ದೇವಿಯ ಭಕ್ತಾದಿಗಳು 14ದಿನಗಳ ಕಾಲ ಹೊರಗೆ ಹೋಗಿ ಗುಡಿಸಲು ಕಟ್ಟಿ ಕಠಿಣವ್ರತದಿಂದಿದ್ದು, ಹಬ್ಬದ ಮುಂದಾಳತ್ವವ ವಹಿಸುತ್ತಾರೆ.ಇಬ್ಬರು ಮಡಿವಂತ ಭಕ್ತರು ದೇವಿಯ ಆಜ್ಞೆಯಂತೆನೇಗಿಲು ಕಟ್ಟಿ ಬನವನ್ನು ಉಳುತ್ತಾರೆ. ಈ ಮಣ್ಣಿನಪ್ರಸಾದವನ್ನು ಭಕ್ತರು ತಮ್ಮ ಮನೆಗೆ ಕೊಂಡೊಯ್ಯುವಪೂಜೆಯೇ ‘ಹೊನ್ನಾರʼ.

ಈ ಹಬ್ಬಕ್ಕೆ ಮೊದಲು ಸುತ್ತಮುತ್ತಲ ಗ್ರಾಮದಭಕ್ತಾದಿಗಳು ವಿಶಿಷ್ಟ ಸ್ನಾನಕ್ಕಾಗಿ ಹೇಮಾವತಿನದಿಯಲ್ಲಿ ಮಿಂದುಕೊಳ್ಳುತ್ತಾರೆ. ಪದ್ಮಾವತಿ ದೇವಿಹೊನ್ನಾರದೊಂದಿಗೆ ಆರಂಭವಾಗಿರುವ ಈ ಹಬ್ಬಪದ್ಮಾವತಿ ಚೌತ, ಬಾಸಿನ ಸುಗ್ಗಿ, ಜಕ್ಕಳಿ ಈರಣ್ಣಗುಡಿಕೆಂಡೋತ್ಸವ, ಬೆಟ್ಟಗೆರೆ ಭೈರವೇಶ್ವರ ಚೌತ, ರಾಟವಾಣಜಾತ್ರೆ, ಮುಗ್ರಳ್ಳಿ ಕೆಂಡೋತ್ಸವ, ಹನುಮನಹಳ್ಳಿಹೊನ್ನಮ್ಮನ ಉಯ್ಯಾಲೆ ಹಬ್ಬದೊಂದಿಗೆ ಕೊನೆಯದಾಗಿ ಸೊಪ್ಪು ಒಪ್ಪಿಸುವ ಸಮರ್ಪಣೆ ಕಾರ್ಯಕ್ರಮ ನಡೆಯುತ್ತದೆ.

ಫಲ್ಗುಣಿಯಲ್ಲಿ ಮುಗಿಹಬ್ಬ ಜಾತ್ರೆ ಹಾಗೂ ದೇವರ ಮನೆಯಲ್ಲಿ ಸೊಪ್ಪು ಒಪ್ಪಿಸುವ ಅಂದರೆ ಸುಗ್ಗಿ ಉತ್ಸವ ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಹೀಗೆ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಸುಗ್ಗಿ ಸಂಭ್ರಮವನ್ನು ಗಮನಿಸಬಹುದಾಗಿರುತ್ತದೆ.
————————

ಸಂಪತ್ ಬೆಟ್ಟಗೆರೆ

“ಮಲೆನಾಡಿನ ಸಂಸ್ಕೃತಿ, ಜಾನಪದ ಹಾಗೂ ಜನಜೀವನದ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಸೇತುವೆಯಾಗಿ ಸುಗ್ಗಿಹಬ್ಬಗಳು ಉತ್ಸವ, ಜಾತ್ರೆ ಸ್ವರೂಪದಲ್ಲಿ ಆಚರಿಸಲ್ಪಡುತ್ತವೆ. ಆದರೆ ಕಳೆದ ವರ್ಷದಿಂದ ಕೋವಿಡ್‌-19 ಸಂಕಷ್ಟದ ಕಾರಣದಿಂದ ಇಂತಹ ಐತಿಹಾಸಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಾಗಿಲ್ಲ. ಕೃಷಿ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವ ಇವು ಮುಂದಿನ ವರ್ಷಗಳಲ್ಲಿ ಕೋವಿಡ್‌ ಸಂಕಷ್ಟ ಪರಿಹಾರವಾದ ನಂತರ ಮತ್ತೆ ಆಚರಿಸಲ್ಪಡುತ್ತವೆ ಎಂಬುದು ಸಧ್ಯದ ಆಶಯ”

-ಡಾ.ಸಂಪತ್‌ ಬೆಟ್ಟಗೆರೆ, ಲೇಖಕರು

Spread the love

Related Articles

Leave a Reply

Your email address will not be published. Required fields are marked *

Back to top button