ಜಿಲ್ಲಾ ಸುದ್ದಿ
ಕೊರೋನಾ ನಾಗಾಲೋಟ; ಮೈಸೂರಿನ ನಂತರದ ಸ್ಥಾನದಲ್ಲಿ ಚಿಕ್ಕಮಗಳೂರು

ಚಿಕ್ಕಮಗಳೂರು: ಕೋವಿಡ್ ಪಾಸಿಟಿವಿಟಿ ಲೆಕ್ಕದಲ್ಲಿ ಚಿಕ್ಕಮಗಳೂರು 2ನೇ ಸ್ಥಾನಕ್ಕೆ ಬಂದಿದ್ದು, ಜಿಲ್ಲೆಯ ಜನ ಆತಂಕಗೊಳ್ಳುವಂತಾಗಿದೆ.
ಜಿಲ್ಲಾಡಳಿತ ಎಷ್ಟೇ ತೆರನಾದ ಲಾಕ್ಡೌನ್ ಕ್ರಮ ಜಾರಿಗೊಳಿಸಿದರೂ ಸಹ ಕೊರೋನಾ ಕಟ್ಟಿಹಾಕುವಲ್ಲಿ ವಿಫಲವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆ ಶೇ.30.23ರ ಪಾಸಿಟಿವಿಟಿಯಿಂದ ಪ್ರಥಮ ಸ್ಥಾನದಲ್ಲಿದ್ದರೆ, 24.20 ರಷ್ಟಿರುವ ಚಿಕ್ಕಮಗಳೂರು 2ನೇ ಸ್ಥಾನದಲ್ಲಿದೆ. ಇದಕ್ಕೆ ಜನರ ಬೇಜವಾಬ್ದಾರಿ ಕಾರಣವೋ ಅಥವಾ ಲಾಕ್ಡೌನ್ ನಿಯಮದ ವೈಫಲ್ಯವೋ ಎಂಬುದೇ ತಿಳಿಯುತ್ತಿಲ್ಲ.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜೂ.5ರವರೆಗೆ 267 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಲೆಕ್ಕಕ್ಕೆ ನಿಲುಕದ ಸಾವಿನ ಸಂಖ್ಯೆ ಎಷ್ಟಿದೆಯೆಂದು ತಿಳಿದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ವಿಸ್ತರಣೆ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.