ಜಿಲ್ಲಾ ಸುದ್ದಿ
ದಕ್ಷಿಣ ಕನ್ನಡದ ಬಾಂಜಾರು ಮಲೆ ಕೊರೋನಾ ಮುಕ್ತ ಗ್ರಾಮ

ಮಂಗಳೂರು : ಕೊರೋನಾ ವಿಶ್ವವನ್ನು ಬಾಧಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮಕ್ಕೆ ಎಪೆಕ್ಟ್ ಆಗಿಲ್ಲ. ಕೊರೋನಾ ಸೋಂಕಿನ ವಿರುದ್ಧ ಹಳ್ಳಿಯ ಜನರ ಒಗ್ಗಟ್ಟಿನ ಹೋರಾಟದಿಂದಾಗಿ ಯಾರಿಗೂ ಕೂಡ ಸೋಂಕು ತಗುಲಿಲ್ಲ.
ಹೀಗಾಗಿ ಕೊರೋನಾ ಫ್ರೀ ಗ್ರಾಮ ಎಂದೇ ಕರೆಸಿಕೊಳ್ಳು ತ್ತಿದೆ.ಬಾಂಜಾರು ಮಲೆ ಗ್ರಾಮದಲ್ಲಿ ಎರಡೂ ಅಲೆಯಲ್ಲೂ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿಲ್ಲ.ಗ್ರಾಮದಲ್ಲಿ ಒಟ್ಟೂ 40 ಕ್ಕೂ ಹೆಚ್ಚು ಕುಟುಂಬಗಳಿದ್ದು,170ಕ್ಕೂ ಹೆಚ್ಚು ಜನಸಂಖ್ಯೆ ಇದೆ.
ಆದರೆ ಪೇಟೆಯಿಂದ ಈ ಕುಗ್ರಾಮದ ನಾಗರಿಕರು ಅಂತರ ಕಾಯ್ದುಕೊಂಡಿದ್ದಾರೆ. ಗ್ರಾಮದ ಇಬ್ಬರು ಎಲ್ಲರಿಗೂ ಪೇಟೆಯಿಂದ ದಿನಸಿ ವಸ್ತು ತಂದು ಕೊಡುತ್ತಾರೆ.ಎಲ್ಲರ ಮನೆಯಿಂದ ದಿನಸಿ ಚೀಟಿ ಸಂಗ್ರಹಿಸಿ ಅಂಗಡಿಯಿಂದ ತಂದು ಕೊಡ್ತಾರೆ.ಆದರೆ ಯಾರೂ ಕೂಡ ಗ್ರಾಮದೊಳಗೆ ಹೊರಗಿನಿಂದ ಬರುವಂತಿಲ್ಲ. ಯಾರೂ ಹೊರಹೋಗುವಂತಿಲ್ಲ.
ಸ್ವಯಂ ಶಿಸ್ತು ಪಾಲಿಸಿದ್ದರಿಂದ ಕೊರೋನಾವನ್ನು ಗ್ರಾಮದೊಳಗೆ ನುಸುಳಲು ಜನರು ಬಿಟ್ಟಿಲ್ಲ.