ಜಿಲ್ಲಾ ಸುದ್ದಿ
ಬೆಳಗಾವಿ: ವೃದ್ದಾಶ್ರಮಗಳಲ್ಲಿ ಕೊರೊನಾ ಸೋಂಕು

ಬೆಳಗಾವಿಯ ವೃದ್ಧಾಶ್ರಮಗಳ ಹಿರಿಜೀವಗಳನ್ನ ಕೊರೊನ ಕಾಡುತ್ತಿದೆ. ಕೋವಿಡ್ ಸೋಂಕಿನಿಂದ ಅನೇಕರು ಸಂಕಷ್ಟದಲ್ಲಿದ್ದು, ಬೆಳಗಾವಿಯ ಎರಡು ವೃದ್ಧಾಶ್ರಮಗಳ 23 ಜನರಿಗೆ ಕೋವಿಡ್ ಪಾಸಿಟಿವ್ ದೃಢಟ್ಟಿದೆ.
ಬಸವನಕುಡಚಿ ಬಳಿಯ ದೇವರಾಜ ಅರಸ್ ಕಾಲೋನಿಯ ವೃದ್ಧಾಶ್ರಮದ 14 ಜನರು ಹಾಗೂ ತಾಲೂಕಿನ ಬಾಮನವಾಡಿ ಬಳಿಯ ವೃದ್ಧಾಶ್ರಮದ 9 ಜನರಿಗೆ ಕೋವಿಡ್ ಸೋಂಕು ತಗುಲಿದ್ದು ಇತರರು ಆತಂಕದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ.
ವೃದ್ಧಾಶ್ರಮದಲ್ಲಿ ಸೋಂಕು ಪತ್ತೆಯಾದ ಬಹುತೇಕರಲ್ಲಿ ರೋಗದ ಗುಣಲಕ್ಷಣ ಇಲ್ಲ. ಎರಡೂ ವೃದ್ಧಾಶ್ರಮಗಳ 23 ಜನರ ಪೈಕಿ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಳಿದ 20 ಜನರು ವೃದ್ಧಾಶ್ರಮದಲ್ಲೇ ಪ್ರತ್ಯೇಕ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ,ಇನ್ನು ಈಗಾಗಲೇ ಕುಟುಂಬಸ್ಥರಿಂದ ದೂರ ಉಳಿದಿರುವ ವಯೋವೃದ್ಧರಿಗೆ ಸದ್ಯ ಕೊರೊನ ವಿರುದ್ಧ ಜಯ ಸಾಧಿಸುವುದು ಸವಾಲಿನ ಕೆಲಸವಾಗಿದೆ.