ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಮಗುವನ್ನೂ ಬಿಟ್ಟಿಲ್ಲ ಕೊರೋನಾ!

ವರದಿ: ತೇಜಸ್ವಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಜನ ಕೊರೋನಾ ಸೋಂಕಿತರಾಗಿದ್ದಾರೆ.ಅದ್ರಲ್ಲೂ ಪುಟ್ಟ ಮಕ್ಕಳಿಂದ 18 ವರ್ಷದ ವಯೋಮಾನದ ಜನತೆಗೆ ಎರಡನೆ ಅಲೆ ದೊಡ್ಡ ಹೊಡೆತ ಕೊಟ್ಟಿದೆ.ಹಾಗಿದ್ದರೆ ಈ ಬಾರಿ ಹದಿನೆಂಟು ವರ್ಷದೊಳಗಿನವರಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೇಗಿದೆ? ಇಲ್ಲಿದೆ ವಿವರ.
ಜಿಲ್ಲೆಯಲ್ಲಿ 18 ವರ್ಷ ಒಳಗಿನ ಒಟ್ಟು 5626 ಜನ ಈವರೆಗೆ ಸೋಂಕಿತರಾಗಿದ್ದಾರೆ.ಇದರಲ್ಲಿ ಹತ್ತು ವರ್ಷ ಒಳಗಿನ 2273 ಮಕ್ಕಳು ಸೋಂಕಿತರಾದರೆ, ಹನ್ನೊಂದರಿಂದ ಹದಿನೆಂಟು ವರ್ಷದ 3353 ಜನರಿಗೆ ಸೋಂಕು ತಗುಲಿದೆ.ಇನ್ನು ಕೋವಿಡ್ ಗೆ ಮೂರು ತಿಂಗಳ ಮಗು ಅಸುನೀಗಿದೆ.
ಅದೃಷ್ಟವಶಾತ್ ಹದಿನೆಂಟು ವರ್ಷದ ಒಳಗಿನವರಲ್ಲಿ ಸಾವು ಕಾಣದೇ ಚೇತರಿಸಿಕೊಂಡಿರುವವರಲ್ಲಿ ಹೆಚ್ಚಿದ್ದಾರೆ.
ಜಿಲ್ಲೆಯಲ್ಲಿ ಸಾವಿನ ಪ್ರಮಾಣ -1.2 ರಷ್ಟಿದೆ.ಇನ್ನು ಜಿಲ್ಲೆಯಲ್ಲಿ ಎಲ್ಲಾ ವಯೋಮಾನದ ಅಂಕಿ ಅಂಶ ತೆಗೆದುಕೊಂಡರೆ ಹತ್ತು ದಿನದಲ್ಲಿ 22 ಜನ ಆಸ್ಪತ್ರೆಗೆ ದಾಖಲಾದ 24 ಘಂಟೆಯಲ್ಲಿ ಮೃತಪಟ್ಟಿದ್ದಾರೆ.
ಸಾವಿಗೆ ಪ್ರಮುಖ ಕಾರಣಗಳಿವು:
ಜಿಲ್ಲೆಯಲ್ಲಿ ಅti ಹೆಚ್ಚು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿ ಈವರೆಗೆ 5413 ಜನ ಚಿಕಿತ್ಸೆ ಪಡೆಯುತ್ತಿದ್ದರೆ,ಆಸ್ಪತ್ರೆಯಲ್ಲಿ ಕೇವಲ 503 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಇಂದಿಗೆ 541 ಜನ ಕೊರೋನಾಕ್ಕೆ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು ಸಮಸ್ಯೆ ತೀವ್ರವಾದಾಗ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಹಲವರು ಚಿಕಿತ್ಸೆಯನ್ನು ಸಹ ತೆಗೆದುಕೊಳ್ಳದೇ ಅಂತಿಮ ಘಟ್ಟದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದೇ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣಲು ಕಾರಣವಾಗಿದೆ.