ರೈತನ ಮೇಲೆ ಕೋವಿಡ್ ಕರಾಳ ನೆರಳು; ಮಾರಾಟವಾಗದ ಬೆಳೆ ಕೈಯಾರೆ ನಾಶಪಡಿಸಿದ ನೊಂದ ರೈತ

ಹೌದು ಲಾಕ್‌ಡೌನ್ ಎಫೆಕ್ಟನಿಂದ ಸಂಕಷ್ಟಗೊಂಡಿರುವ ರೈತರ ಗೋಳು ಕೇಳೋರೇ ಇಲ್ಲ ಎನ್ನುವಂತಾಗಿದೆ, ರೈತನೊಬ್ಬ ಹಸಿಮೆಣಸಿನಕಾಯಿ ಮಾರಾಟವಾಗದೇ ಕೈಯಾರೇ ಮೂರು ಎಕರೆ ಬೆಳೆ ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ.ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಹುಣಶಿಕಟ್ಟಿಯ ರೈತ ರುದ್ರಪ್ಪ ಕಾಜಗಾರ ತನ್ನ 3 ಎಕರೆ ಮೆಣಸಿನಕಾಯಿ ಮೇಲೆ ಟ್ರ್ಯಾಕ್ಟರ್ ಹಾಯಿಸಿದ್ದಾನೆ.
ಲಾಕ್ಡೌನ್ನಿಂದ ಬೆಳೆದ ಬೆಳಯನ್ನು ಮಾರಾಟ ಮಾಡಲು ರೈತರಿಗೆ ಆಗುತ್ತಿಲ್ಲಾ, ಇನ್ನು ಬೇರೆಡೆ ಸಾಗಾಟ ಮಾಡಬೇಕಂದರೆ ಸಾಗಾಣಿಕಾ ವೆಚ್ಚ ಕೂಡ ಈ ರೈತನ ಬಳಿ ಇಲ್ಲಾ, ಕಠಿಣ ಲಾಕ್ ಡೌನ್ ನಿಂದ ಈ ಸಂಕಷ್ಟ ಎದುರಾಗಿದೆ ಎಂದು ರುದ್ರಪ್ಪ ತನ್ನ ಅಳಲು ತೋಡಿಕೊಳ್ಳುತ್ತಿದ್ದಾನೆ.
ಬೆಳೆದ ಬೆಳೆ ನೆಲಕ್ಕೆ ಗೊಬ್ಬರ ಮಾಡಿರುವ ರುದ್ರಪ್ಪಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆ ಬೆಳದಿದ್ದ, ಸದ್ಯ ಮಾರುಕಟ್ಟೆಯಲ್ಲಿ 40 ರೂ.ಗೆ ಕೆಜಿ ಹಸಿಮೆಣಸಿನಕಾಯಿ ಮಾರಾಟ ಆಗುತ್ತಿದೆ. ಆದ್ರೆ ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ಸಿಗೋದು ಕೆಜಿಗೆ ಕೇವಲ 5 ರಿಂದ 10 ರೂಪಾಯಿ ಮಾತ್ರ. ಕಳೆದ ಎರಡು ತಿಂಗಳ ಹಿಂದೆ 1.20ಲಕ್ಷ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದ ರುದ್ರಪ್ಪನಿಗೆ ಕೋವಿಡ್ ಆರ್ಭಟದಿಂದ ಹಸಿಮೆಣಸಿನಕಾಯಿ ಮಾರಾಟ ಮಾಡಲಾಗಲಿಲ್ಲ.
ಇನ್ನು ಮಧ್ಯವರ್ತಿಗಳು ನೇರವಾಗಿ ಹೊಲಕ್ಕೆ ಬಂದು ಖರೀದಿಗೆ ಪುಸಲಾಯಿಸುತ್ತಾರೆ ,ಇವರ ನೀಡುವದು ಮಾತ್ರ ಕೆಜಿಗೆ 5 ರೂಪಾಯಿ ಎಂದು ಅನೇಕ ರೈತರು ಹೇಳುತ್ತಿದ್ದಾರೆ, ಇವರಿಗೆ ನೀಡಿದರೆ ರೈತನ ಲಾಭ ಜೇಬಿಗೆ ಬೀಳುವುದು ಪಕ್ಕಾ, ಇವೆಲ್ಲವುಗಳಿಂದ ಬೇಸತ್ತಿರುವ ರೈತರಿಗೆ ವಿಶೇಷವಾಗಿ ಈ ಸಮಯದಲ್ಲಿ ಸರ್ಕಾರದ ನೆರವು ಬೇಕಿದೆ, ಆದ್ರೆ ಕಣ್ಣಿದ್ದೂ ಕುರುಡುಣಾನಂತಾಗಿರುವ ಸರ್ಕಾರ ನೆರವು ನೀಡುವುದೇ ಎಂದು ಕಾದು ನೋಡಬೇಕಿದೆ.