ಜಿಲ್ಲಾ ಸುದ್ದಿ

ಉಡುಪಿಯಲ್ಲಿ ಪಾಸಿಟಿವಿಟಿ ರೇಟ್ ಗಣನೀಯ ಇಳಿಕೆ: ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇದೀಗ ಪಾಸಿಟಿವಿಟಿ ರೇಟ್ 10 ಕ್ಕಿಂತ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ ಇನ್ನು 50ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ಇರುವ 16 ಗ್ರಾಮಗಳನ್ನು ಮುಂದಿನ 5ದಿನ ಸೀಲ್ ಡೌನ್ ಮಾಡಲಾಗಿದೆ ಹಾಗೂ 40ಗ್ರಾಮಗಳನ್ನ ಸೀಲ್ ಡೌನ್ ಮಾಡಲಾಗಿತ್ತು ಒಂದು ವಾರದಲ್ಲಿ 50 ಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣ ಇರುವ ಗ್ರಾಮಗಳ ಸಂಖ್ಯೆ16 ಕ್ಕೆ ಇಳಿದಿದೆ ಮನೆಗಳನ್ನ ಸೀಲ್ ಡೌನ್ ಮಾಡಿರುವುದರಿಂದ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ‌ಕಡಿಮೆಯಾಗಿದೆ.

ಈಗಲೂ 3ಸಾವಿರದಷ್ಟು ಟೆಸ್ಟ್ ಮಾಡಲಾಗುತ್ತಿದ್ದು ಹೀಗಾಗಿ ಬೆಡ್, ವೆಂಟಿಲೇಟರ್ ಅವಶ್ಯಕತೆ ಕುರಿತು ಕರೆಗಳು ಬರುತ್ತಿಲ್ಲ ಮುಂದಿನ ಅಲೆ ಒಳಗಾಗಿ ನಮ್ಮ ಜಿಲ್ಲೆಯಲ್ಲೇ ಆಕ್ಸಿಜನ್ ಉತ್ಪಾದನೆಯಾಗುತ್ತೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನೆ ಶೀಘ್ರವಾಗಿ ಶುರುವಾಗುತ್ತೆ ಮತ್ತು ಮುಂದಿನ ಕೊರೋನಾ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಅನ್ನುವ ಸಲಹೆ ತಜ್ಞರು ಕೊಟ್ಟಿದ್ದಾರೆ. ಈ ಬಗ್ಗೆ ತಜ್ಞ ವೈಧ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದರು.

ಮುಂದಿನ ಅಲೆ ಎದುರಿಸಲು ಮೂಲಸೌಕರ್ಯ ಸಿದ್ದಪಡಿಸುತ್ತಿದ್ದೇವೆ ದಾನಿಗಳು, ಸಿಎಸ್ ಆರ್ ಫಂಡ್ ಹಾಗೂ ಸರ್ಕಾರದಿಂದ ಜೊತೆಯಾಗಿ ಎದುರಿಸುತ್ತೇವೆ ಎರಡನೇ ಅಲೆಯಲ್ಲಿ 3ವರೆ ಸಾವಿರದಷ್ಟು ಮಕ್ಕಳಿಗೆ ಕೊರೋನಾ ಬಂದಿದೆ ಆದ್ರೆ ಯಾವುದೇ‌ ಮಗುವಿಗೂ ತೊಂದರೆಯಾಗಿಲ್ಲ ಹಾಗೂ ಮುಂದಿನ ಅಲೆಯಲ್ಲಿ ಮಕ್ಕಳಿಗೆ ಅಪಾಯವೇ ಹೆಚ್ಚು ಇದೆ. ಹೀಗಾಗಿ ಮಕ್ಕಳಿಗೆ ಬೇರೆಯದ್ದೇ ವೆಂಟಿಲೇಟರ್ ಹಾಗೂ ಐಸಿಯು ಬೇಕಾಗುತ್ತೆ. ಮಕ್ಕಳ ಜೊತೆ ಪೋಷಕರು ಇರುವ ಕಾರಣ ಹೊಸ ಕೋವಿಡ್ ಕೇರ್ ಸೆಂಟರ್ ನಿರ್ಮಿಸಬೇಕಾಗುತ್ತೆ. ಈ ಎಲ್ಲಾ ಸಲಹೆ ತಜ್ಞ ವೈಧ್ಯರು ಕೊಟ್ಟಿದ್ದಾರೆ. ಈ ಸಲಹೆಯಂತೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿಕೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button