ಬೈಲಹೊಂಗಲದಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಯೋಜನೆಗೆ ಚಾಲನೆ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಕಿತ್ತೂರು ಭಾಗದ ಶಾಸಕ ಮಹಾಂತೇಶ್ ದೊಡ್ಡಗೌಡರ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಗಡಿ ಗ್ರಾಮದಲ್ಲಿ ಪ್ರತಿಯೊಂದು ಮನೆ ಮನೆಗೆ ಹೋಗಿ ಕೊರೋನ ಟೆಸ್ಟ್ ನಡೆಸಿದರು ಹಳ್ಳಿಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು.
ಬೆಳಗಾವಿ ಜಿಲ್ಲಾದ್ಯಂತ ಕೊರೊನ ಹಳ್ಳಿಗಳಲ್ಲಿ ಹಬ್ಬದಂತೆ ತಡೆಯಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಳ್ಳಿಗಳಿಗೆ ಭೇಟಿ ನೀಡಲು ಆರಂಭಿಸಿದ್ದು ಕಿತ್ತೂರು ಭಾಗದ ಶಾಸಕ ಮಹಾಂತೇಶ್ ದೊಡ್ಡಗೌಡರ ಇಂದು ತಮ್ಮ ಭಾಗದಲ್ಲಿ ಅಧಿಕಾರಿಗಳಿಗೆ ಸಾಥ್ ನೀಡಿದರು ಅಲ್ಲದೆ ಸೋಂಕಿತ ಪ್ರತಿಯೊಂದು ಮನೆಗೆ ಔಷಧಿ ಕೀಟಗಳನ್ನು ವಿತರಿಸಿ. ಜನರಿಗೆ ಕೋರೋನದ ಬಗ್ಗೆ ಇದ್ದ ತಪ್ಪು ತಿಳಿವಳಿಕೆಯನ್ನೂ ದೂರ ಮಾಡಲು ಯತ್ನಿಸಿದರು.
ಆಶಾ ಕಾರ್ಯಕರ್ತರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ತಂಡ ಗ್ರಾಮದಲ್ಲಿ ರೋಗಲಕ್ಷಣ ಇರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತವಾದ ಔಷಧಿ ಮತ್ತು ಮಾತ್ರೆಗಳನ್ನು ನೀಡುತ್ತಿದ್ದಾರೆ.ಗ್ರಾಮವನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಶಾಸಕರು ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆಯ ಜೊತೆಗೆ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಬೇಕು. ಹಾಗೂ ಸೊಂಕಿತರನ್ನು ಹೋಮ್ ಐಸೋಲೇಷನ್ ಅವಕಾಶ ನೀಡಬಾರದು ಎಂದರು ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಹೀಗಾಗಿ ಆರೋಗ್ಯ ಇಲಾಖೆ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.