ಜಿಲ್ಲಾ ಸುದ್ದಿ
ಮೃತದೇಹದ ಅಂತ್ಯಸಂಸ್ಕಾರ ಮಾಡಿದ ಸಾಮಾಜಿಕ ತಂಡ

ಚಿಕ್ಕಮಗಳೂರು: ಶ್ವಾಸಕೋಶದ ಸಮಸ್ಯೆ ಮತ್ತು ಜ್ವರದಿಂದ ಬಳಲಿ ಮೃತಪಟ್ಟ ವ್ಯಕ್ತಿಯ ಶವಕ್ಕೆ ಮೂಡಿಗೆರೆಯ ಸಕ್ರಿಯ ಸಾಮಾಜಿಕ ಸಂಸ್ಥೆಯವರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಕೊರಗಪ್ಪ (62) ಸುಮಾರು ಹತ್ತು ದಿನಗಳಿಂದ ಅನಾರೋಗ್ಯದಿಂದ ಬಳಲಿ ಮನೆಯಲ್ಲೇ ಮೃತಪಟ್ಟಿದ್ದರು. ಸಂಬಂಧಿಕರು ಸಂಸ್ಥೆಯ ಬಿಳುಗುಳ ಹಸೈನಾರ್ ಗೆ ಫೋನ್ ಮಾಡಿದಾಗ ತಕ್ಷಣ ತಂಡದೊಂದಿಗೆ ಧಾವಿಸಿದರು. ಅಧ್ಯಕ್ಷ ಫಿಶ್ ಮೋನು, ಕಾರ್ಯಾಧ್ಯಕ್ಷ ಅಬ್ದುಲ್, ರಹಿಮಾನ್ , ಆರಿಫ್, ಜೆಸಿಪಿ ಡ್ರೈವರ್ ಪ್ರಕಾಶ್ ಅಂಬುಲೆನ್ಸ್ ಡ್ರೈವರ್ ಶಿವಪ್ಪ ಎಲ್ಲರೂ ಪಿಪಿಇ ಕಿಟ್ ಧರಿಸಿ ಬಿಜುವಳ್ಳಿ ಸ್ಮಶಾಣದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಮೂಡಿಗೆರೆಯ ಜೆಡಿಎಸ್ ಪಕ್ಷದಿಂದ ಅಂಬುಲೆನ್ಸ್ ಉಚಿತವಾಗಿ ನೀಡಲಾಗಿತ್ತು.