ಜಿಲ್ಲಾ ಸುದ್ದಿ

ದಾಂಡೇಲಿ: ಲಕ್ಷಾಂತರ ರೂಪಾಯಿ ಮೌಲ್ಯದ ಕೋಟಾ ನೋಟು ವ್ಯವಹಾರ ಮಾಡುತ್ತಿದ್ದ ಆರು ಜನರ ಬಂಧನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಖೋಟಾನೋಟು ವ್ಯವಹಾರ ಮಾಡುತ್ತಿದ್ದ 6 ಮಂದಿಯನ್ನು ಬಂಧಿಸಿ 4.5 ಲಕ್ಷ ರೂ. ಅಸಲಿ ನೋಟು, 72 ಲಕ್ಷ ರೂ. ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಮಹಾರಾಷ್ಟ್ರದ ಕಿರಣ ದೇಸಾಯಿ (40), ಗಿರೀಶ ಪೂಜಾರಿ (42), ಬೆಳಗಾವಿಯ ಅಮರ ನಾಯ್ಕ (30),ಸಾಗರ ಕುಣ್ಣೂರ್ಕರ್ (28), ದಾಂಡೇಲಿ ಯ ಶಬ್ಬೀರ್ ಕುಟ್ಟಿ (45), ಶಿವಾಜಿ ಕಾಂಬ್ಳೆ (52) ಆಗಿದ್ದು, ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವವರ ಮನೆಯಲ್ಲಿ 4.5 ಲಕ್ಷ ರೂ. ಅಸಲಿ ನೋಟು ಪಡೆದು 9 ಲಕ್ಷ ರೂ. ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ದಾಳಿ ನಡೆಸಲಾಗಿದೆ‌.

ವ್ಯವಹಾರಕ್ಕೆ ಬಳಸಿದ್ದ ಎರಡು ಕಾರು ಸಹ ವಶಪಡಿಸಿಕೊಳ್ಳ ಲಾಗಿದೆ. ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button