ಜಿಲ್ಲಾ ಸುದ್ದಿ

ಮೈಕ್ರೋ ಕಂಟೈನ್​ಮೆಂಟ್ ವಲಯಗಳ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

ಕಾರವಾರ : ಹೊಸದಾಗಿ ಹೊರಡಿಸಿದ ಮಾರ್ಗಸೂಚಿ ಯಲ್ಲಿ ತಿಳಿಸಿದಂತೆ, ಸೋಮವಾರ,ಮಂಗಳವಾರ ಬುಧವಾರ ಮತ್ತು ಗುರುವಾರ ದಿನಗಳಂದು ಬೆಳಿಗ್ಗೆ 8 : 00 ರಿಂದ ಮದ್ಯಾಹ್ನ 12 ಘಂಟೆ ಯವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಪಡಿಸಿದ್ದಾರೆ.

ರಾಜ್ಯ ಸರ್ಕಾರವು ನೀಡಿದ ಮಾರ್ಗಸೂಚಿಯಲ್ಲಿ ನಮೂದಾಗಿರುವ ಅಗತ್ಯ ವಸ್ತುಗಳು ಮತ್ತು ದಿನಸಿ ವಸ್ತುಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಸ್ತುಗಳನ್ನು ರೈತ ಸಮುದಾಯ ಪಡೆದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ ಎಂದರು.

ಈ ಹಿಂದೆ ಕಂಟೋನ್ಮೆಂಟ್ ವಲಯಗಳೆಂದು ಗುರುತಿಸ ಲಾಗಿರುವ ಪ್ರಮುಖವಾಗಿ, ಕಾರವಾರ,ದಾಂಡೇಲಿ, ಸಿದ್ದಾಪುರ,ಶಿರಸಿ,ಯಲ್ಲಾಪುರ ಮತ್ತು ಮುಂಡಗೋಡ ಇವುಗಳಲ್ಲಿ ಮೈಕ್ರೋ ಕಂಟೋನ್ಮೆಂಟ್ ವಲಯ ಗಳನ್ನು ಗುರುತಿಸಿ,ಇಂತಹ ಮೈಕ್ರೋ ಕಂಟೋನ್ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ವ್ಯವಸ್ಥೆಯನ್ನು ಜಾರಿಗೆ ತಂದು ಇಂತಹ ವಲಯಗಳಲ್ಲಿ ಜನರ ಅತ್ಯವಶ್ಯಕ ವಸ್ತುಗಳಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

ತುರ್ತು ಸೇವೆಗಳಿಗೆ ಜನರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.ಪಡಿತರ ಚೀಟಿಯ ಆಹಾರ ಶೇಕಡಾ 90 ರಷ್ಟು ಹಂಚಿಕೆ ಆಗಿದ್ದು,ಉಳಿದ ಪಡಿತರ ಹಂಚಿಕೆಯನ್ನು ಮಾಡಿಕೊಡುವ ವ್ಯವಸ್ಥೆಯನ್ನು
ಆಯಾ ತಾಲೂಕಿನ ತಹಸೀಲ್ದಾರರಿಗೆ ವಹಿಸಲಾಗಿದೆ ಎಂದರು.

ಯಾವ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹರಡುವ ಸಾಧ್ಯತೆ ಇರುತ್ತದೆ ಎಂಬುದನ್ನು ಪರಿಶೀಲಿಸಿಕೊಂಡು ಸೂಕ್ಷ್ಮ ಕಂಟೋನ್ಮೆಂಟ್ ವಲಯಗಳ ನ್ನಾಗಿ ಮಾಡಲು ತಹಶೀಲ್ದಾರ ರಿಗೆ ಮತ್ತು ಸಹಾಯಕ ಆಯುಕ್ತರುಗಳಿಗೆ ತಿಳಿಸಲಾಗಿದೆ.ಸೂಕ್ಷ್ಮ ಕಂಟೋನ್ಮೆಂಟ್ ವಲಯಗಳೆಂದು ಘೋಷಣೆ ಮಾಡಿದ ಪ್ರದೇಶಗಳಿಗೆ ದಿನಸಿ ವಸ್ತುಗಳು,ಹಣ್ಣು, ತರಕಾರಿಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲು ಆಯಾ ಸ್ಥಳೀಯ ಆಡಳಿತ ವ್ಯವಸ್ಥೆಗೆ ಸೂಚನೆಯನ್ನು ನೀಡಲಾಗಿದೆ.ಇವೆಲ್ಲವುಗಳನ್ನು ಮಾಡುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಹಳ ಮುಖ್ಯವಾಗಿ ಕೋವಿಡ್ ಪ್ರಕರಣಗಳು ಪ್ರಸರಣ ಆಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಸಲಹೆಗಳನ್ನು ಮತ್ತು ಸೂಚನೆ ಗಳನ್ನು ನೀಡಲಾಗಿದೆ.ಅತ್ಯಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button