ಕೊರೊನಾ ಪರಿಹಾರ ಪ್ಯಾಕೇಜ್, ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಆನ್ಲೈನ್ ಪ್ರತಿಭಟನೆ

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ದಿಂದಾಗಿ ಎಲ್ಲಾ ವರ್ಗದ ಜನರು ತತ್ತರಸಿ ಹೋಗಿದ್ದಾರೆ. ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಎರಡನೇ ಕೊರೊನಾ ಪರಿಹಾರ ಪ್ಯಾಕೇಜ್ ಘೋಷಣೆ ಕೂಡಾ ಮಾಡಿದೆ. ನಮಗೂ ಕೊರೊನಾ ಪರಿಹಾರ ಕೊಡಿ,ಸೇವಾ ಭದ್ರತೆ ಕ್ಕಾಗಿ ಅತಿಥಿ ಉಪನ್ಯಾಸಕರು ಆನ್ಲೈನ್ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ..
ಬಾಗಲಕೋಟೆ ಜಿಲ್ಲೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರು ಕೋವಿಡ್ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಜೀವನ ಸಾಗಿಸುತ್ತಿದ್ದ ಸಾವಿರಾರು ಜನ ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗಿದೆ. ಒಂದೆಡೆ ಕಾಲೇಜು ಬಂದ್ ಆಗಿವೆ, ಮತ್ತೊಂದೆಡೆ ಸಂಬಂಧವಿಲ್ಲದೆ ಪರಿತಪಿಸುವಂತಾಗಿದೆ. ಹಾಗಾಗಿ ಅತಿಥಿ ಉಪನ್ಯಾಸಕರಿಗೂ ಕೊರೊನಾ ಪ್ಯಾಕೇಜ್ ಘೋಷಿಸಿ, ಜೊತೆಗೆ ಸೇವಾ ಭದ್ರತೆ ಖಾತ್ರಿಪಡಿಸಿ, ಕೊರೊನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರಿಗೆ ಸೂಕ್ತ ಪರಿಹಾರ ಒದಗಿಸಬೇಕು.ಈಗ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಈ ಹಿಂದೆ ನೇಮಿಸಿದ್ದ ಎಲ್ಲಾ ಉಪನ್ಯಾಸಕರನ್ನು ನಿಯೋಜಿಸಬೇಕು ಈ ಎಲ್ಲಾ ಬೇಡಿಕೆಯೊಂದಿಗೆ ಅತಿಥಿ ಉಪನ್ಯಾಸಕರರು ಆನ್ಲೈನ್ ಮೂಲಕವೇ ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಆನ್ಲೈನ್ ನಲ್ಲಿ ಅತಿಥಿ ಉಪನ್ಯಾಸಕರು ಬೇಡಿಕೆಯ ಹಕ್ಕೊತ್ತಾಯವನ್ನು ಮಂಡಿಸಿದ್ದಾರೆ. ಕೊರೊನಾದಿಂದ ಅತಿಥಿ ಉಪನ್ಯಾಸಕರು ರೋಸಿ ಹೋಗಿದ್ದಾರೆ.ಕಳೆದ ಬಾರಿ ಲಾಕ್ ಡೌನ್ ವೇಳೆ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿಲ್ಲ.ಈ ಬಾರಿಯೂ ಲಾಕ್ ಡೌನ್ ಜಾರಿಯಿಂದ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವನ್ನು ಗಮನಸೆಳೆಯಲು ಅತಿಥಿ ಉಪನ್ಯಾಸಕರು ಆನ್ಲೈನ್ ಮೂಲಕ ಪ್ರತಿಭಟನೆ ಕೈಗೊಂಡಿದ್ದು ವಿಶೇಷವಾಗಿತ್ತು.ಇನ್ಮೇಲಾದರೂ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸುತ್ತಾ ಎಂದು ಕಾದು ನೋಡಬೇಕಿದೆ.