ಸ್ವಂತ ಮಗನಿಂದಲೇ ದಿವ್ಯಾ ಹಾಗರಗಿಗೆ ಛೀಮಾರಿ: ಮಗನ ಮಾತು ಕೇಳಿ ಕಣ್ಣೀರಿಟ್ಟ ದಿವ್ಯಾ

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿರುವ ದಿವ್ಯಾ ಹಾಗರಗಿಗೆ ಸ್ವತಃ 14 ವರ್ಷದ ಮಗನೇ ಛೀಮಾರಿ ಹಾಕಿದ್ದಾನೆ. ನಿನ್ನಿಂದಾಗಿ ಏನು ತಪ್ಪು ಮಾಡದ ಪಪ್ಪಾ ಜೈಲಿನಲ್ಲಿದಾರೆ. ಅವರನ್ನು ಬಿಟ್ಟು ಇರೋದಕ್ಕೆ ನಮಗೆ ಆಗ್ತಿಲ್ಲ, ಇದಕ್ಕೆಲ್ಲಾ ನೀನೆ ಕಾರಣ, ನೀ ಸರಿಯಿಲ್ಲ ಅಂತ ಮಕ್ಕಳು ಛೀಮಾರಿ ಹಾಕಿ ಕಣ್ಣೀರಿಟ್ಟಿದ್ದಾರೆ..
ತಾಯಿಗಿಂತ ತಂದೆಯ ಜೊತೆಗೆ ಹೆಚ್ಚು ಅಟ್ಯಾಚ್ಮೆಂಟ್ ಹೊಂದಿರುವ ಮಕ್ಕಳು,ನಿತ್ಯವೂ ಟಿವಿ, ಪತ್ರಿಕೆಗಳಲ್ಲಿ ತಾಯಿಯ ಸುದ್ದಿ ನೋಡಿ ರೋಸಿ ಹೋಗಿದ್ದಾರೆ. ಕಲಬುರಗಿ ಸಿಐಡಿ ಕಚೇರಿಗೆ ಆಗಮಿಸಿ ದಿವ್ಯಾಳನ್ನು ಭೇಟಿ ಮಾಡಿದ ಇಬ್ಬರು ಗಂಡು ಮಕ್ಕಳು, ಪಪ್ಪಾ ಇಲ್ಲದೇ ಇರೋದಕ್ಕೆ ಆಗ್ತಿಲ್ಲ.. ಅಪ್ಪ ದೂರ ಆಗೋಕೆ ನೀನೆ ಕಾರಣವಂತೆ, ನಿನ್ನಿಂದಲೇ ನಮ್ಮ ಪಪ್ಪಾ ಜೈಲು ಸೇರುವಂತಾಗಿದೆ ಎಂದು ನೇರವಾಗಿ 14 ವರ್ಷದ ಮಗ ಛೀಮಾರಿ ಹಾಕಿದ್ದಾನೆ.
ಅಪ್ಪನಿಗೆ ನಿನ್ನಿಂದ ಈ ಪರಿಸ್ಥಿತಿ ಬಂದಿದೆ, ಅವರಿಗೆ ಜೈಲಿನಲ್ಲಿ ಇರೋದಕ್ಕೆ ಆಗ್ತಿಲ್ಲ. ನೀನು ಮಾಡಿದ ತಪ್ಪು ಕೆಲಸದಿಂದ ನಾವು ಈ ಪರಿಸ್ಥಿತಿ ಎದುರಿಸುತ್ತಿದ್ದೆವೆ ಎಂಬ ಸ್ವಂತ ಮಗನ ಮಾತುಗಳನ್ನ ಕೇಳಿ ದಿವ್ಯಾ ಹಾಗರಗಿ ಕಣ್ಣಿರು ಹಾಕಿದ್ದಾಳೆ. ದಿವ್ಯಾ ಹಾಗರಗಿ ಪಿಎಸ್ಐ ಪರೀಕ್ಷಾ ಅಕ್ರಮದ ಕೇಂದ್ರಬಿಂದು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿಯಾಗಿದ್ದಾಳೆ.