ಜಿಲ್ಲಾ ಸುದ್ದಿ

ಕೋವಿಡ್ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ

ಮಡಿಕೇರಿ: ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಕಳೆದ 22 ದಿನಗಳಿಂದ ಊಟ, ಉಪಹಾರವನ್ನು ಉಚಿತವಾಗಿ ನೀಡುವ ಮೂಲಕ ಹಸಿದ ಹೊಟ್ಟೆಯನ್ನು ತಣಿಸುತ್ತಿರುವ ಕೆಲಸವನ್ನು ಕೊಡಗು ರಕ್ಷಣಾ ವೇದಿಕೆ ಮಾಡುತ್ತಿದೆ.

ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆ ಬಳಿ ನಡೆಯುತ್ತಿರುವ ಅನ್ನ ದಾಸೋಹಕ್ಕೆ ಹಲವಾರು ಗಣ್ಯರು, ಹಿತೈಷಿಗಳು ಸಹಾಯ ನೀಡಿದ್ದಾರೆ.

ಹಸಿವಿನಿಂದ ಬಂದವರಿಗೆ ಊಟ ವಿತರಿಸಿ ಬಡವರ ಕಷ್ಟ ಸುಖಗಳಲ್ಲಿ ಬಾಗಿಯಾಗುವ ಪವನ್ ಪೆಮ್ಮಯ್ಯ ಅವರ ಜನಸೇವೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೊಡಗಿನ ಶಾಸಕದ್ವಯರು ನೆನ್ನೆ ಅನ್ನ ದಾಸೋಹ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ಭರವಸೆ ನೀಡಿದರು.

ಈ ಸಂದರ್ಭ ಕೊರವೇ ಸ್ವಯಂ ಸೇವಕರು ಹಾಜರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button