ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಆಹಾರ ಕಿಟ್ ವಿತರಣೆ

ರಾಮನಗರ: ಕೊರೊನಾ ತೀವ್ರತೆ ಹೆಚ್ಚಾಗಿ, ಸರ್ಕಾರ ಲಾಕ್ ಡೌನ್ ಅನ್ನು ಮುಂದುವರಿಸಿರು ಹಿನ್ನೆಲೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಫುಡ್ ಕಿಟ್ ವಿತರಿಸಿಸರು.
ಕೂಟಗಲ್ ಹೋಬಳಿಯ ಕ್ಯಾಸಪುರ ಗ್ರಾಮದಲ್ಲಿ ಫುಡ್ ಕಿಟ್ ವಿತರಿಸಿ ಮಾತನಾಡಿದ ಬಾಲಕೃಷ್ಣ, ನನ್ನ ಕ್ಷೇತ್ರದ ಜನತೆಗೆ ತಮ್ಮ ಕೈಲಾದಷ್ಟು ಸಣ್ಣ ಸಹಾಯ ಮಾಡುತ್ತಿದ್ದು, ಪ್ರತಿಯೊಂದು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದು ಪ್ರತಿಯೊಂದು ಗ್ರಾಮದ ಜನತೆಗೆ ಆಹಾರ ಸಾಮಾಗ್ರಿ ವಿತರಿಸಲಾಗುವುದೆಂದರು.