ಜಿಲ್ಲಾ ಸುದ್ದಿ
ಸಿದ್ದರಾಮಯ್ಯ ಸೂಚನೆ ಮೇರೆಗೆ ಉಚಿತ ಆಂಬ್ಯುಲೆನ್ಸ್ ಹಸ್ತಾಂತರ

ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಮುಖಂಡ ಮಹೇಶ್ ಹೊಸಗೌಡರ ಆಂಬ್ಯುಲೆನ್ಸ್ ಹಸ್ತಾಂತರಿಸಿದರು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಹೋಬಳಿ ವ್ಯಾಪ್ತಿಯ ಕೋವಿಡ್ ರೋಗಿಗಳಿಗೆ ಅನುಕೂಲವಾಗುವಂತೆ ಸಿದ್ದರಾಮಯ್ಯ ಸೂಚನೆ ಮೇರೆಗೆ ಆಂಬ್ಯುಲೆನ್ಸ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಡಿ ಯಲಿಗಾರ ಮುಖಂಡ ಎಮ್ ಜಿ ಕಿತ್ತಲಿ, ವಿಧಾನಸೌಧ ನಿವೃತ್ತ ಕಾರ್ಯದರ್ಶಿ ಎಸ್ ವಾಯ್ ಕುಳಗೇರಿ ಹಿರಿಯ ಮುಖಂಡರಾದ ಎಸ್ ಡಿ ಜೋಗಿನ ತಾಲೂಕ ದಂಡಾಧಿಕಾರಿ ಸುಹಾಸ ಇಂಗಳೆ, ಟಿಎಚ್ ಓ ಎಂ ಬಿ ಪಾಟೀಲ್, ವೈದ್ಯಾಧಿಕಾರಿ ಶಶಿರೇಖಾ ಹಲಗಲಿಮಠ , ಕುಳಗೇರಿ ಗ್ರಾಮದ ಪ್ರಮುಖ ಹಿರಿಯ ಮುಖಂಡರು ಉಪಸ್ಥಿತರಿದ್ದರು.