ಗದಗ

ಸಿಎಂ ಬದಲಾವಣೆ ಗದ್ದಲದಲ್ಲಿ ಮುಳುಗಿರುವ ಬಿಜೆಪಿಯಿಂದ ಜನತೆಗೆ ದ್ರೋಹ: ಎಚ್ ಕೆ ಪಾಟೀಲ್

ಗದಗ: ಮುಖ್ಯಮಂತ್ರಿ ಬದಲಾವಣೆ ಗೊಂದಲ ಗಲಾಟೆಯಲ್ಲಿ ಬಿಜೆಪಿಯವರಿದ್ದಾರೆಂದು ಗದಗದಲ್ಲಿ ಶಾಸಕ ಎಚ್ ಕೆ ಪಾಟೀಲ ಹೇಳಿದ್ದಾರೆ.

ಮೂರನೇ ಅಲೆ ದೊಡ್ಡ ಸವಾಲಾಗಿ ಬರುತ್ತಿದೆ, ಅವರಿಗೆ ಅದರ ಪರಿವೆಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಅವರ ಆಂತರಿಕ ವಿಚಾರವಾಗಿದೆ. ಅದ್ರೆ, ಇಂಥ ಸಂಧರ್ಭದಲ್ಲಿ ಎಲ್ಲವನ್ನೂ ಬದಿಗೊತ್ತಿ ಕೆಲಸ ಮಾಡ್ಬೇಕು. ಕೇವಲ ಪಕ್ಷದ ಕಿತ್ತಾಟದಲ್ಲಿ ಗಮನ ಹರಿಸಿ ಸರ್ಕಾರ ನಿಸ್ತೇಜವಾಗಿದೆ ಎಂದರು.

ಪೆಟ್ರೋಲ್, ಡೀಸೆಲ್, ಗೊಬ್ಬರ ದರ ಏರಿಕೆ, ದಿನಸಿ ಬೆಲೆ ಏರಿಕೆಯಾಗಿದೆ.ಇಂಥ ಸಂದರ್ಭದಲ್ಲಿ ಈ ಸಮಸ್ಯೆಯತ್ತ ಸಂಪೂರ್ಣ ಗಮನ ಹರಿಸಬೇಕು.ಕೆಲಸ ಮಾಡುವುದನ್ನ ಬಿಟ್ಟು ಸಹಿ ಮಾಡಿಸಲು ಓಡಾಡುವುದು. ಬೀಳಿಸಲು ಓಡಾಡುತ್ತಿದ್ದಾರೆ. ಇದು ಸರ್ಕಾರದ ನಿಷ್ಕಾಳಜಿಯಾಗಿದೆ. ಜನಪರ ಕಳಕಳಿ ಇಲ್ಲ ಅನ್ನೋದನ್ನ ತೋರಿಸುತ್ತೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ವ್ಯಾಕ್ಸಿನೇಷನ್‌ ಗೆ ಕಾಂಗ್ರೆಸ್ 100 ಕೋಟಿ ರೂಪಾಯಿ‌‌ ನೀಡುವುದನ್ನ ಸರ್ಕಾರ ನಿರಾಕರಿಸಿದ ವಿಚಾರಕ್ಕೆ ಎಚ್ ಕೆ ಪಾಟೀಲ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಕಾರಾತ್ಮಕವಾಗಿ ನಿರ್ಣಯ ತೆಗೆದುಕೊಳ್ಳಲಾರದ್ದು ಅಮಾನವೀಯವಾಗಿದೆ.ಶಾಸಕರ ಹಣದಲೋ.. ಸ್ವಂತ ಹಣದಲ್ಲೋ.. ಮನೆ ಮಾರಿಕೊಟ್ಟರೇನು ಎಂದು ಪ್ರಶ್ನಿಸಿದರು.ಉಚಿತ ವ್ಯಾಕ್ಸಿನೇಷನ್‌ ಗಾಗಿ ಹಣ ಬೇಕು ಎಂದು ಒತ್ತಾಯಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button