ಜಿಲ್ಲಾ ಸುದ್ದಿ
ತಡರಾತ್ರಿ ಸುರಿದ ಮಳೆಗೆ ಕೊಚ್ಚಿಹೋದ ರಸ್ತೆ; ಸಂಚಾರ ಅಸ್ತವ್ಯಸ್ತ

ಬಾಗಲಕೋಟೆ: ತಡರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆ ಕೊಚ್ಚಿ ಹೋಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ತಡರಾತ್ರಿ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಮಳೆಯಿಂದ ಇಲಕಲ್ ಕಂದಗಲ್ ಮುಖ್ಯ ರಸ್ತೆ ಕೊಚ್ಚಿ ಹೋಗಿದ್ದು, ಸೇತುವೆಯು ಸಂಪೂರ್ಣ ಮುಳ್ಳುಕಂಟಿಗಳಿಂದ ಬಂದ್ ಆಗಿದ್ದು, ನೀರು ಸರಾಗವಾಗಿ ಹೋಗಲು ಆಸ್ಪದ ಇರದ ಕಾರಣ ಮಳೆ ನೀರು ರಸ್ತೆಯ ಮೇಲೆ ಹರಿದು ರಸ್ತೆ ಕುಸಿತವಾಗಿದೆ. ರಸ್ತೆ ಹೋಗಿರುವುದರಿಂದ ಸಂಚಾರ ಸ್ಥಗಿತಗೊಂಡು ಜನ ಪರದಾಡುವಂತಾಗಿದೆ.