ಜಿಲ್ಲಾ ಸುದ್ದಿ
ಮೃತ ಪತ್ರಕರ್ತನ ಕುಟುಂಬಕ್ಕೆ ಸಹಾಯಧನ ನೀಡಿದ ಡಿಸಿಎಂ ಕಾರಜೋಳ

ಬೆಳಗಾವಿ: ಬೆಳಗಾವಿಯಲ್ಲಿ ಕೊರೋನ ದಿಂದ ಮೃತಪಟ್ಟ ಪತ್ರಕರ್ತನ ಕುಟುಂಬಕ್ಕೆ ಡಿಸಿಎಂ ಗೋವಿಂದ ಕಾರಜೋಳ ಒಂದು ಲಕ್ಷ ಸಹಾಯಧನ ನೀಡಿ ಮೃತರ ಕುಟುಂಬಕೆ ಸಾಂತ್ವನ ಹೇಳಿದರು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಎರಡು ದಶಕಗಳಿಂದ ನಿಸ್ಪಕ್ಷಪತವಾಗಿ ಹಲವು ಪತ್ರಿಕೆ ಗಳಲ್ಲಿ ವರದಿಗಾರಣಾಗಿ ಕೆಲಸ ಮಾಡುತ್ತಿದ್ದ, ಸಂಜೀವಕುಮಾರ ನಾಡಿಗೇರ ಇತ್ತೀಚಿಗೆ ಮಹಾಮಾರಿ ಕೊರೋನಾಕ್ಕೆ ಬಲಿಯಾಗಿದ್ದರು.
ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮನೆಯ ಯಜಮಾನನನ್ನು ಕಳೆದುಕೊಂಡು ಸಂಕಷ್ಟಕ್ಕೇ ಸಿಲುಕಿದ್ದರು.. ಮೃತ ಸಂಜೀವ ಕುಮಾರ ನಾಡಗೇರ ಅವರಿಗೆ ಇಬ್ಬರು ಪುತ್ರರಿದ್ದು, ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲೆಂದು ವ್ಯಯಕ್ತಿಕವಾಗಿ ಒಂದು ಲಕ್ಷ ರೂಪಾಯಿಯನ್ನು ಜಿಲ್ಲಾಧಿಕಾರಿ ಕಚೇರಿ ಅವರಣದಲಿ ಹಣ ನೀಡಿದರು. ಈ ವೇಳೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಪತ್ರಕರ್ತರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ಸರ್ಕಾರದಿಂದ ಇನ್ನು ಹೆಚ್ಚಿನ ಅನುದಾನ ಬರಬೇಕು ಎಂದು ಹೇಳಿದರು.