ಜಿಲ್ಲಾ ಸುದ್ದಿ

ಕೋವಿಡ್ ಆಸ್ಪತ್ರೆಯಲ್ಲಿ ಭಯಾನಕ ದೃಶ್ಯ; ಮೃತದೇಹದ ಪಕ್ಕದಲ್ಲೇ ರೋಗಿಗಳಿಗೆ ಊಟ!

ಚಿಕ್ಕಮಗಳೂರು: ಕರೋನ ಸೋಂಕಿತರನ್ನು ದಾಖಲು ಮಾಡಿರುವ ಆಸ್ಪತ್ರೆಯಲ್ಲಿ ಮೃತಪಟ್ಟ ಶವದ ಪಕ್ಕದಲ್ಲೇ ಇತರೆ ರೋಗಿಗಳು ತಿಂಡಿ, ಊಟ ಮಾಡುತ್ತಿರುವ ಭಯಾನಕ ಸನ್ನಿವೇಶ ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಂಡುಬಂದಿದೆ.

ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಬೆಡ್ವೊಂದರಲ್ಲಿ ಮೃತದೇಹವನ್ನು ಪ್ಯಾಕ್ ಮಾಡುತ್ತಿದ್ದಾರೆ. ಶವದ ಪಕ್ಕದಲ್ಲೇ ಸೋಂಕಿತರು ಮಲಗಿದ್ದು ಸಂಬಂಧಿಕರೂ ಜತೆಯಲ್ಲೇ ಕುಳಿತಿದ್ದಾರೆ. ಪಿಪಿಇ ಕಿಟ್ ಧರಿಸದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಉಳೀಸಬೇಕಾದ ಆಸ್ಪತ್ರೆಯೇ ಕರೋನಾ ಹಾಟ್ ಸ್ಪಾಟ್ ಆಗುತ್ತಿರುವ ಆತಂಕ ತಂದೊಡ್ಡಿದೆ.

ಇದು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವುದಕ್ಕೆ ಇಂತಹ ಬೇಜವಾಬ್ದಾರಿತವೇ ಕಾರಣವಾಗಿದೆ. ನಿಯಂತ್ರಣ ಮಾಡಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಇದು ದ್ಯೋತಕ.

————

“ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಸರ್ಜನ್ ಬಳಿ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” -ಉಮೇಶ್, ಡಿಎಚ್ಒ

Spread the love

Related Articles

Leave a Reply

Your email address will not be published. Required fields are marked *

Back to top button