ಹುಬ್ಬಳ್ಳಿ - ಧಾರವಾಡ

ನಾನು ದೆಹಲಿಗೆ ಬಂದಿದ್ದು ಖಾಸಗಿ ಕಾರ್ಯಕ್ರಮಕ್ಕೆ; ರಾಜಕೀಯ ಇಲ್ಲ: ಶಾಸಕ ಅರವಿಂದ ಬೆಲ್ಲದ

ಧಾರವಾಡ ಪಶ್ಚಿಮ‌ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು ಸಿಎಂ ರೇಸನಲ್ಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಸಾಕಷ್ಟು ಸದ್ದು ಮಾಡುತ್ತಿದ್ದು, ಈಗ ಅವರ ದೆಹಲಿ ಪ್ರಯಾಣವು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು, ಆದರೆ ಅದಕ್ಕೆ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಸಮಾಜಿಕ ಜಾಲತಾಣದ, ಫೇಸ್‌ಬುಕ್‌ ಪೇಜ್‌ನ ಮೂಲಕ ಸ್ಪಷ್ಟನೆಯನ್ನು ನೀಡಿದ್ದು, ನಾನು ದೆಹಲಿಗೆ ಬಂದಿದ್ದು, ಕುಟುಂಬದ ಖಾಸಗಿ ಕಾರ್ಯಕ್ರಮಕ್ಕಾಗಿ ಎಂದಿದ್ದಾರೆ.

ಯಾವುದೇ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವುದಕ್ಕಾಗಿ ಅಲ್ಲ, ಹಾಗಾಗಿ ಈಗ ನಾನು ರಾಜಕೀಯ ಬೆಳವಣಿಗೆಯ ಕುರಿತು ಚರ್ಚೆ ನಡೆಸಲು ದೆಹಲಿ ಬಂದಿದ್ದೇವೆ ಎಂಬ ಮಾಧ್ಯಮಗಳ ವರದಿಯು ಸತ್ಯಕ್ಕೆ ದೂರವಾಗಿದದ್ದಾಗಿದೆ ಎಂದು ಸ್ಪಷ್ಟಪಸಿದ್ದಾರೆ.

ಅಲ್ಲದೆ ನಾನು ನಮ್ಮ ರಾಷ್ಟ್ರೀಯ ನಾಯಕರ ಭೇಟಿಗಾಗಿಯಾಗಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ.
ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ಏಕೆ ಹೀಗೆ ವರದಿಯಾಗುತ್ತಿದೆ ಎಂಬವುದು ಅರ್ಥವಾಗುತ್ತಿಲ್ಲಾ, ಅಲ್ಲದೆ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button