ಧಾರವಾಡ: ಕಾಂಗ್ರೆಸ್ನಿಂದ ಕಿಟ್ ವಿತರಣೆ ವೇಳೆ ನೂಕುನುಗ್ಗಲು; ಕೋವಿಡ್ ಮಾರ್ಗಸೂಚಿ ಉಲ್ಲಂಘನೆ

ಧಾರವಾಡ: ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಾಟಗಾ, ತಮ್ಮ ಹುಟ್ಟುಹಬ್ಬ ಹಿನ್ನೆಲೆಯಲ್ಲಿ, ಬಡವರಿಗೆ ಸಹಾಯ ಮಾಡುವ ಉದೇಶದಿಂದ ಅಗತ್ಯ ವಸ್ತುಗಳ ಕಿಟ್ಗಳನ್ನು ವಿತರಣೆ ಮಾಡಲು ಮುಂದಾಗಿದ್ದರು. ಅದಕ್ಕಾಗಿ ನಗರದ ಹಾವೇರಿ ಪೇಟೆಯ ನಿವಾಸಿಗಳಿಗೆ ಕಿಟ್ ನೀಡಲು ಬಂದಿದ್ದರು. ಆದರೆ ಕೊರೊನಾ ಮರ್ಗಸೂಚಿಗಳನ್ನು ಪಾಲಿಸದೇ ನೂಕುನುಗ್ಗಲು ಉಂಟಾಗಿದೆ. ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಹಾಕದೇ ನೂರಾರು ಜನರು ಕಿಟ್ ಪಡೆಯಲು ಮುಗಿಬಿದ್ದಿರುವ ದೃಶ್ಯಗಳು ಕಂಡುಬಂದವು.
ಸರ್ಕಾರ, ವೈದ್ಯರು ಮೂರನೇ ಅಲ್ಲೆಯನ್ನು ತಡೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ, ರಾಜಕೀಯ ನಾಯಕರು ಕಿಟ್ ವಿತರಣೆ ನೇಪ ಮಾಡಿಕೊಂಡು ಪದೇ ಪದೇ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿರುವುದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಕಿಟ್ ವಿತರಣೆ ವೇಳೆ ಪೊಲೀಸ್ ಅಧಿಕಾರಿಗಳ ಸಹಾಯವನ್ನು ಪಡೆಯದೇ ಕೈ ಮುಖಂಡ ಎಡವಟ್ಟು ಮಾಡಕೊಂಡಿರುವುದು ಸ್ಪಷ್ಟವಾಗಿದೆ.
ಕಿಟ್ ವಿತರಣೆಗೆ ಬಂದಿದ್ದ ವಾಹನವನ್ನು ನೂರಾರು ಸಂಖ್ಯೆಯಲ್ಲಿ ಜನರು ಸುತ್ತುವರೆದು, ವೈರಸ್ ಹರಡುವಿಕೆಯ ಯಾವುದೇ ಚಿಂತೆ ಇಲ್ಲದೆ ಹರಸಾಹಸ ಮಾಡಿ ಕಿಟ್ ಪಡೆದುಕೊಂಡರು. ಪದೇ ಪದೇ ರಾಜಕೀಯ ನಾಯಕರ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿದ್ದರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮೌನವಹಿಸಿರುವದು ಪ್ರಜ್ಞಾವಂತ ನಾಗರಿಕರ ಆಕ್ರೊಶಕ್ಕೆ ಕಾರಣವಾಗಿದೆ.